ಉಡುಪಿ ಮೇ.1: ಆನ್ಲೈನ್‌ನಲ್ಲಿ ಹೆಚ್ಚುವರಿ ಹಣಗಳಿಸುವ ಕೆಲಸದ ಆಮೀಷವೊಡ್ಡಿ ಯುವಕನೋರ್ವನಿಂದ 5.90 ಲಕ್ಷ ರೂ. ಹಣ ಪಡೆದು ವಂಚಿಸಿರುವ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ವಂಚನೆಗೆ ಒಳಗಾದ ಅಲೆವೂರಿನ ರಾಜೀವ ನಗರದ ಗೋಪಾಲ ಅವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಗೋಪಾಲ ಅವರಿಗೆ ಎ.25 ರಂದು ಅಪರಿಚಿತ ವ್ಯಕ್ತಿಗಳು ಟೆಲಿಗ್ರಾಂ ಆ್ಯಪ್‌ನಲ್ಲಿ ಟಾಸ್ಕ್ ಲಿಂಕ್ ಕಳುಹಿಸಿದ್ದು, ಟಾಸ್ಕ್ ಕಂಪ್ಲೀಟ್ ಮಾಡಿದಲ್ಲಿ 30% ರಿಂದ 40% ಹೆಚ್ಚುವರಿ ಹಣ ನೀಡುವುದಾಗಿ ನಂಬಿಸಿದ್ದರು. ಅಲ್ಲದೆ ಎ.25 ರಿಂದ 27 ರವರೆಗೆ ಒಟ್ಟು 5,90,000 ರೂ.ಹಣವನ್ನು ಆರೋಪಿಗಳು ತಮ್ಮ ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡು ಟಾಸ್ಕ್ ನೀಡದೆ ಪಡೆದ ಹಣವನ್ನೂ ವಾಪಾಸು ನೀಡದೆ ಮೋಸ ಮಾಡಿ, ನಷ್ಟ ಉಂಟು ಮಾಡಿರುವುದಾಗಿ ನೀಡಿದ ದೂರಿನಂತೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.