Tuesday, September 17, 2024
Homeಸುದ್ದಿಕ್ರೆಡಿಟ್ ಕಾರ್ಡ್ ಮರುನೋಂದಣಿ ನೆಪದಲ್ಲಿ ಲಿಂಕ್ ಕಳುಹಿಸಿ ಲಕ್ಷಾಂತರ ರೂ ವಂಚನೆ

ಕ್ರೆಡಿಟ್ ಕಾರ್ಡ್ ಮರುನೋಂದಣಿ ನೆಪದಲ್ಲಿ ಲಿಂಕ್ ಕಳುಹಿಸಿ ಲಕ್ಷಾಂತರ ರೂ ವಂಚನೆ

ಮಂಗಳೂರು,ಮೇ 04: ಕ್ರೆಡಿಟ್ ಕಾರ್ಡ್ ಮರುನೋಂದಣಿ ನೆಪದಲ್ಲಿ ಲಿಂಕ್ ಕಳುಹಿಸಿ ವ್ಯಕ್ತಿಯೋರ್ವರಿಗೆ 1.37 ಲ.ರೂ. ವಂಚಿಸಲಾಗಿದೆ.

ದೂರುದಾರರ ಇಮೇಲ್ ಐಡಿಗೆ ಮೇ 1ರಂದು [email protected] ಇ-ಮೇಲ್ ಐಡಿಯಿಂದ Netflix Order Failed-action needed ಎಂಬ ಸಂದೇಶ ಬಂದಿತ್ತು. ಅದನ್ನು ತೆರೆದಾಗ ಅದರಲ್ಲಿ ‘ನಿಮ್ಮ ಕ್ರೆಡಿಟ್ ಕಾರ್ಡ್ ವಿಫಲವಾಗಿದೆ. ಅದನ್ನು ರಿ ರಿಜಿಸ್ಟರ್ ಮಾಡಬೇಕು’ಎಂದು ಬರೆಯಲಾಗಿತ್ತು.

ಅದರ ಜತೆಗೆ ಲಿಂಕ್ ಕಳುಹಿಸಲಾಗಿತ್ತು. ದೂರುದಾರ ಆ ಲಿಂಕ್ ತೆರೆದು ನೋಡಿದಾಗ ಅದರಲ್ಲಿ ಕ್ರೆಡಿಟ್ ಕಾರ್ಡ್ ವಿವರಗಳನ್ನು ಹಾಕುವಂತೆ ತಿಳಿಸಲಾಗಿತ್ತು. ಅದನ್ನು ನಂಬಿದ ದೂರುದಾರರು ತಮ್ಮ ಕ್ರೆಡಿಟ್ ಕಾರ್ಡ್ ವಿವರಗಳನ್ನು ಅದರಲ್ಲಿ ನಮೂದಿಸಿದ್ದರು. ಅನಂತರ ಅದನ್ನು ವೆರಿಫಿಕೇಶನ್ ಮಾಡಲು ಒಟಿಪಿ ಬಂದಿದ್ದು ಆ ಒಟಿಪಿಯನ್ನು ಹಾಕಿದ್ದರು. ಆ ಕೂಡಲೆ ಅವರ ಕ್ರೆಡಿಟ್ ಕಾರ್ಡ್‌ನಿಂದ 1,37,432 ರೂ. ವರ್ಗಾವಣೆಯಾದ ಬಗ್ಗೆ ಸಂದೇಶ ಬಂದಿದೆ.

ಈ ಬಗ್ಗೆ ಮಂಗಳೂರು ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News