ಸ್ವಂತಿಕೆಯಿರದ ಬಿಜೆಪಿಗೆ ಕಾಂಗ್ರೆಸ್‌ ಪ್ರಣಾಳಿಕೆಯೇ ದಾರಿದೀಪ – ಸೊರಕೆ

ಶಿರ್ವ: ಕಾಂಗ್ರೆಸ್‌ನ 5 ವರ್ಷಗಳ ಹಿಂದಿನ ಅಭಿವೃದ್ಧಿ ಕಾಮಗಾರಿಗಳನ್ನು ಪಟ್ಟಿ ಮಾಡಿ ಮತದಾರರ ಮುಂದಿಟ್ಟು ಬಿಜೆಪಿ ಓಟು ಕೇಳುತ್ತಿದೆ. ಸ್ವಂತಿಕೆಯಿರದ ಬಿಜೆಪಿಗೆ ಕಾಂಗ್ರೆಸ್‌ ಪ್ರಣಾಳಿಕೆಯೇ ದಾರಿದೀಪ ಎಂದು ಕಾಪು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನಯ ಕುಮಾರ್‌ ಸೊರಕೆ ಹೇಳಿದ್ದಾರೆ.

ಅವರು ಗುರುವಾರ ಶಿರ್ವ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿ ಮಾತನಾಡಿದರು.

2013 ರಿಂದ 2018ರಲ್ಲಿ ತಾನು ಶಾಸಕನಾಗಿದ್ದ ಅವಧಿಯಲ್ಲಿ ನಡೆಸಿದ್ದ ಶೇ.75 ಅಭಿವೃದ್ಧಿ ಕಾಮಗಾರಿಗಳನ್ನು ತಮ್ಮ ಕಾಲದ ಅಭಿವೃದ್ಧಿ ಎಂದು ಮತದಾರರ ಮುಂದೆ ಸುಳ್ಳು ಹೇಳಿ ಬಿಜೆಪಿ ಓಟು ಕೇಳುವ ಗಿಮಿಕ್‌ ಮಾಡ್ತಾ ಇದ್ದು ಯಾವುದೇ ಸಾರ್ಥಕತೆ ಇಲ್ಲ. ಕಳೆದ ಬಾರಿಯ ಕಾಂಗ್ರೆಸ್‌ ಪ್ರಣಾಳಿಕೆಯನ್ನು ಈ ಬಾರಿ ಬಿಜೆಪಿ ಕಾಪಿ ಮಾಡಿ ಬಿಡುಗಡೆ ಮಾಡಿದ್ದು, ತನ್ನ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳು ಮತ್ತು ಕಾಂಗ್ರೆಸ್‌ ಪ್ರಣಾಳಿಕೆಯೇ ಬಿಜೆಪಿಗೆ ದಾರಿದೀಪವಾಗಿದೆ ಎಂದು ಅವರು ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್‌ ಮುಖಂಡರಾದ ಪ್ರಶಾಂತ್‌ ಜತ್ತನ್ನ,ರತನ್‌ ಶೆಟ್ಟಿ,ಮೆಲ್ವಿನ್‌ ಡಿಸೋಜಾ,ಹಸನಬ್ಬ ಶೇಖ್‌,ಜೆಸಿಂತಾ,ಲ್ಯಾನ್ಸಿ ಕೋರ್ಡಾ ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

You cannot copy content from Baravanige News

Scroll to Top