Tuesday, September 17, 2024
Homeಸುದ್ದಿಭಾರತಕ್ಕೆ ಆಗಮಿಸಿದ ಪಾಕ್‌ ವಿದೇಶಾಂಗ ಸಚಿವ ಬಿಲಾವಲ್‌

ಭಾರತಕ್ಕೆ ಆಗಮಿಸಿದ ಪಾಕ್‌ ವಿದೇಶಾಂಗ ಸಚಿವ ಬಿಲಾವಲ್‌

ಪಣಜಿ, ಮೇ 05: ಪಾಕಿಸ್ತಾನ‌ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೋ ಜರ್ದಾರಿ ಅವರು ಗೋವಾದಲ್ಲಿ ನಡೆಯುವ ಶಾಂಘಾಯ್‌ ಸಹಕಾರ ಸಂಘದ ಸಮಾವೇಶದಲ್ಲಿ (ಎಸ್‌ಸಿಒ) ಪಾಲ್ಕೊಳ್ಳಲು ಗುರುವಾರ ಆಗಮಿಸಿದ್ದಾರೆ.

ಗೋವಾಕ್ಕೆ ಬಂದಿಳಿದ ಬಳಿಕ‌ ಸಲಾಮ್‌ ಫ‌ಮ್‌ ಗೋವಾ ಎಂದು ಟ್ವೀಟ್‌ ಮಾಡಿದ್ದು, ಎಸ್‌ಸಿಒ ಪ್ರಧಾನ ಕಾರ್ಯದರ್ಶಿ ಝಾಂಗ್‌ ಮಿಂಗ್‌ ಜತೆಗೆ ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಮಾತುಕತೆ ನಡೆಸಿದ್ದಾರೆ.

ಇನ್ನು ಭಾರತ ಆಗಮನಕ್ಕೂ ಮುನ್ನ ಟ್ವೀಟ್‌ ಮಾಡಿದ ಬಿಲಾವಲ್‌ ಭುಟ್ಟೊ, ಈ ಸಮಾವೇ ಶದಲ್ಲಿ ಪಾಲ್ಗೊಳ್ಳುವ ನನ್ನ ನಿರ್ಧಾರವು ಶಾಂಘಾಯ್‌ ಸಹಕಾರ ಒಕ್ಕೂಟದ ಬಗ್ಗೆ ಪಾಕಿಸ್ಥಾನದ ಬದ್ಧತೆ ಯನ್ನು ತೋರಿಸುತ್ತದೆ ಎಂದು ಬರೆದು ಕೊಂಡಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News