‘777 ಚಾರ್ಲಿ’ ಸಿನಿಮಾಗೆ ಮತ್ತೊಂದು ಗರಿ; ಡೈರೆಕ್ಟರ್ ಕಿರಣ್ ರಾಜ್ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟಿಸಿರುವ ‘777 ಚಾರ್ಲಿ’ ಚಿತ್ರ ದೆಹಲಿಯಲ್ಲಿ 13ನೇ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದೆ. ಕಿರಣ್‌ರಾಜ್ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಸ್ವೀಕರಿಸಲು ಸಜ್ಜಾಗಿದ್ದಾರೆ.

ಇದೇ ಜೂನ್ 10ಕ್ಕೆ ಕಿರಣ್‌ರಾಜ್ ನಿರ್ದೇಶನದ 777 ಚಾರ್ಲಿ ಸಿನಿಮಾ ಬಿಡುಗಡೆಯಾಗಿ ಒಂದು ವರ್ಷ ಪೂರ್ಣವಾಗಲಿದೆ. ವಾರ್ಷಿಕೋತ್ಸವವನ್ನು ಆಚರಿಸಲು ಚಿತ್ರತಂಡ ಸಿದ್ಧವಾಗಿದ್ದು, ಇದರ ಜೊತೆಗೆ ಮತ್ತೊಂದು ಸಿಹಿ ಸುದ್ದಿಯನ್ನು ಚಾರ್ಲಿ ತಂಡ ಹಂಚಿಕೊಂಡಿದೆ.

ಅಂದಹಾಗೆಯೇ ಚಾರ್ಲಿ ಸಿನಿಮಾ ಭಾರತೀಯ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡ ಸಿನಿಮಾವಾಗಿದೆ. ಶ್ವಾನ ಮತ್ತ ಮನುಷ್ಯನ ನಡುವಿನ ಸಂಬಂಧವನ್ನು ಭಿನ್ನವಾಗಿ ತೋರಿಸಲಾಗಿದೆ. ಹಾಗಾಗಿ ಈ ಸಿನಿಮಾ ಪ್ರಾಣಿ ಪ್ರೀಯರಿಗೆ ಹೆಚ್ಚು ಇಷ್ಟವಾಗಿದೆ. ಈ ಸಿನಿಮಾ ಶೂಟಿಂಗ್​ಗಾಗಿ ಚಿತ್ರತಂಡ ಸಾಕಷ್ಟು ಸರ್ಕಸ್​ ಮಾಡಿದೆ.

ಬಾಲ್ಯದಲ್ಲೇ ಹೆತ್ತವರು, ತಂಗಿಯನ್ನು ಕಳೆದುಕೊಂಡು ಒಂಟಿ ಜೀವನ ನಡೆಸುತ್ತಿದ್ದ ಧರ್ಮನ ಬಾಳಿಗೆ ಬಂದ ಶ್ವಾನ ಚಾರ್ಲಿ ಆತನಲ್ಲಿ ಜೀವನದಲ್ಲಿ ತೀರಾ ಬದಲಾವಣೆಯನ್ನು ಮಾಡುತ್ತದೆ. ಇದನ್ನು ನಿರ್ದೇಶಕ ಕಿರಣ್​ ರಾಜ್​ ಭಿನ್ನವಾಗಿ ‘ಚಾರ್ಲಿ 777’ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರೆ.

Baravanige News

Translate »

You cannot copy content from Baravanige News

Scroll to Top