ಆಲ್ ಇಂಡಿಯಾ ರೇಡಿಯೋ ಎಂಬ ಹೆಸರನ್ನು ಆಕಾಶವಾಣಿ ಎಂದು ಬದಲಿಸುವುದಾಗಿ ಪ್ರಸಾರ ಭಾರತಿ ಸಿಇಒ ಗೌರವ್ ದ್ವಿವೇದಿ ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಪ್ರಸಾರ ಭಾರತಿ ಸಿಇಒ ಈ ನಿರ್ಧಾರ ಈ ಹಿಂದಯೇ ಆಗಿತ್ತು ಆದರೆ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ ಅದನ್ನು ಈಗ ಜಾರಿಗೆ ತಂದಿದ್ದ್ದೇವೆ ಎಂದಿದ್ದಾರೆ.
ರವೀಂದ್ರನಾಥ ಠಾಗೋರ್ ಕೂಡಾ 1939 ರಲ್ಲಿ ಕಲ್ಕತ್ತಾ ಶಾರ್ಟ್‌ವೇವ್ ಸೇವೆಯ ಉದ್ಘಾಟನೆಗೆ ಬರೆದ ಕವನದಲ್ಲಿ ಆಲ್ ಇಂಡಿಯಾ ರೇಡಿಯೊವನ್ನು ‘ಆಕಾಶವಾಣಿ’ ಎಂದು ಉಲ್ಲೇಖಿಸಿದ್ದಾರೆ. ರೇಡಿಯೋಗೆ ‘ಆಕಾಶದಿಂದ ಬರುವ ಧ್ವನಿ’ ಎಂದು ಕರೆಯಲಾಗುತ್ತಿತ್ತು. ಆಕಾಶವಾಣಿ ಎಂಬ ಪದವು ಸಂಸ್ಕೃತದಿಂದ ಬಂದಿದ್ದು, 1970 ರಲ್ಲಿ ಕನ್ನಡದ ಬರಹಗಾರರಾದ ನಾ. ಕಸ್ತೂರಿಯವರು ಈ ಪದವನ್ನು ಸೂಚಿಸಿದರು ಎನ್ನುತ್ತಾರೆ.