ನಾನು ತಟಸ್ಥ, ಆದ್ರೆ ಪಕ್ಷ ವಿರೋಧಿ ಕೆಲಸ ಮಾಡಲ್ಲ – ಶಾಸಕ ಸುಕುಮಾರ ಶೆಟ್ಟಿ

ಉಡುಪಿ: ನನ್ನ ಮನಸ್ಸಿಗೆ ಆಗಿರುವ ನೋವು, ಆಘಾತ ಇನ್ನೂ ಕಡಿಮೆಯಾಗಿಲ್ಲ‌. ನಾನು ಈ ಕ್ಷಣದವರೆಗೆ ತಟಸ್ಥವಾಗಿದ್ದೇನೆ. ನಾಡಿದ್ದು ಹೋಗಿ ಬಿಜೆಪಿಗೆ ಮತ ಹಾಕುತ್ತೇನೆ ಎಂದು ಉಡುಪಿ ಜಿಲ್ಲೆಯ ಬೈಂದೂರು ಶಾಸಕ ಸುಕುಮಾರ ಶೆಟ್ಟಿ ತಿಳಿಸಿದರು.

‌ಟಿಕೆಟ್ ತಪ್ಪಿದ ಶಾಸಕರು ಒಂದೋ ಪಕ್ಷಾಂತರ ಮಾಡಿದ್ದಾರೆ. ಇಲ್ಲ ಪಕ್ಷದ ನಿಯಮವನ್ನು ಒಪ್ಪಿ ಅಭ್ಯರ್ಥಿಗಳ ಜೊತೆ ಗೆಲುವಿಗಾಗಿ ಹೋರಾಟವನ್ನು ನಡೆಸುತ್ತಿದ್ದಾರೆ. ಕರಾವಳಿ ಜಿಲ್ಲೆಯ ಪೈಕಿ ಸುಕುಮಾರ ಶೆಟ್ಟಿ ಮಾತ್ರ ವಿಭಿನ್ನ ನಿಲುವನ್ನ ತಳೆದಿದ್ದಾರೆ. ಬೇಸರವನ್ನು ಇನ್ನು ಉಳಿಸಿಕೊಂಡಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಸುಕುಮಾರಶೆಟ್ಟಿ ಮಾತನಾಡಿದ ಅವರು, ಪಕ್ಷ ವಿರೋಧಿ ಚಟುವಟಿಕೆ ಮಾಡುವ ಸಣ್ಣ ಮನುಷ್ಯ ನಾನಲ್ಲ. ಎದುರಾಳಿ ಪಕ್ಷದ ಜೊತೆ ಕೈಜೋಡಿಸಿದ್ದೇನೆ ಎಂದು ಆರೋಪಿಸುವವರು ಕೀಳು ಮನಸ್ಸಿನವರು. ಪಕ್ಷಾಂತರ ಪಕ್ಷವಿರೋಧಿ ಚಟುವಟಿಕೆ ಮಾಡಿಲ್ಲ ಎಂದು ಹೇಳಿದರು.


ಹಿರಿಯ ನಾಯಕರ ಮೇಲೆ ಗೌರವ ಇದೆ. ಆದರೆ ಪಕ್ಷಕ್ಕೆ ನನ್ನ ಅಭ್ಯರ್ಥಿತನ ಬೇಡವಾಗಿದೆ. ಹಾಗಾಗಿ ನಾನು ಯಾವುದೇ ಪ್ರಚಾರ ಸಭೆ, ರಾಲಿಗಳಲ್ಲಿ ಭಾಗಿ ಆಗಿಲ್ಲ ಯಾವ ಕಾರಣಕ್ಕೆ ನನಗೆ ಟಿಕೆಟ್ ಕೊಡಲಿಲ್ಲ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

You cannot copy content from Baravanige News

Scroll to Top