ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಹಾಗೆಯೇ ಉಡುಪಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳು ಚುನಾವಣೆಯಲ್ಲಿ ಜಯಗಳಿಸಲು ಅಯ್ಯಪ್ಪ ಸ್ವಾಮಿಗೆ ವಿಶೇಷ ಹರಕೆ ಹೊತ್ತ ‘ಅಭಿಮಾನಿ’

ಅಭಿಮಾನ ಎಂದರೆ ಕೇವಲ ಬಾಯಿ ಮಾತಿನಲ್ಲಿ ಮಾತ್ರವಲ್ಲ.., ಕೆಲವರು ಅದನ್ನು ತಮ್ಮ ಜೀವನ ಒಂದು ಭಾಗವೆಂದು ಭಾವಿಸುತ್ತಾರೆ. ಹಾಗೆಯೇ ಉಡುಪಿಯಲ್ಲಿಯೊಬ್ಬರು ತಮ್ಮ ಅಭಿಮಾನವನ್ನು ವಿಶೇಷ ರೀತಿಯಲ್ಲಿ ತೋರ್ಪಡಿಸಿದ್ದಾರೆ.

ಪಡುಬಿದ್ರಿ ಭಗವತಿ ಗ್ರೂಪ್ ನ ಸದಸ್ಯರಾದ ವಿಶ್ವಕಲ್ಲಟ್ಟೆ (ಈಚು ಸ್ವಾಮಿ) ರವರು ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಿ ಸಿಂಹಾಸನದ ಪಟ್ಟಕ್ಕೆ ಏರಲು ಹಾಗೂ ಉಡುಪಿ ಕ್ಷೇತ್ರದಲ್ಲಿ ಯಶ್ ಪಾಲ್ ಸುವರ್ಣ ಮತ್ತು ಕಾಪು ಕ್ಷೇತ್ರದಲ್ಲಿ ಸುರೇಶ್ ಶೆಟ್ಟಿ ಗುರ್ಮೆ ಯವರು ಈ ವರ್ಷದ ಚುನಾವಣೆಯಲ್ಲಿ ಯಶಸ್ವಿಯಾಗಿ ಬಹುಮತಗಳಿಂದ ಗೆದ್ದು ಶಾಸಕ ಪಟ್ಟಕ್ಕೇರಲೆಂದು ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ತುಪ್ಪದ ಅಭಿಷೇಕವನ್ನು ಪಾದಯಾತ್ರೆಯ ಮೂಲಕ ಬಂದು ಸಲ್ಲಿಸುವುದಾಗಿ ಹರಕೆ ಹೊತ್ತಿದ್ದಾರೆ.

ಈ ಅಭಿಮಾನಿಯ ವಿಶೇಷ ಅಭಿಮಾನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ..

You cannot copy content from Baravanige News

Scroll to Top