ಸಿಬಿಎಸ್ಇ 12 ನೇ ತರಗತಿ ಫಲಿತಾಂಶ ಪ್ರಕಟ

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್, ಸಿಬಿಎಸ್ಇ ಫಲಿತಾಂಶಗಳಿಗೆ ಕಾಯುತ್ತಿದ್ದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ. ಇಂದು (ಮೇ 12) 2023 ರ ಸಿಬಿಎಸ್ಇ ಫಲಿತಾಂಶವನ್ನು cbseresults.nic.in ಅಧಿಕೃತ ವೆಬ್‌ಸೈಟ್‌ ಅಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಘೋಷಿಸಿದೆ.

ಫೆಬ್ರವರಿ 15 ರಿಂದ ಏಪ್ರಿಲ್ 5, 2023 ರವರೆಗೆ ನಡೆದ ಪರೀಕ್ಷೆಗಳೊಂದಿಗೆ ಈ ವರ್ಷ ಸುಮಾರು 39 ಲಕ್ಷ ವಿದ್ಯಾರ್ಥಿಗಳು CBSE ಬೋರ್ಡ್ ಪರೀಕ್ಷೆಗಳಲ್ಲಿ ಕಾಣಿಸಿಕೊಂಡಿದ್ದರು. 10 ಮತ್ತು 12 ನೇ ತರಗತಿಗಳ ಎರಡೂ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಲಾಯಿತು ಮತ್ತು ಈಗ 12 ನೇ ತರಗತಿ ಫಲಿತಾಂಶ ಹೊರಬಿದ್ದಿದೆ.


ಸಿಬಿಎಸ್ಇ 12ನೇ ತರಗತಿ ಪರೀಕ್ಷಾ ಫಲಿತಾಂಶ ಅಧಿಕೃತ cbseresults.nic.in ಅಧಿಕೃತ ವೆಬ್‌ಸೈಟ್‌ ಅಲ್ಲಿ ಪ್ರಕಟವಾಗಿದೆ. ಈ ಬಾರಿ 12ನೇ ತರಗತಿ ಪರೀಕ್ಷೆಯಲ್ಲೂ ಬಾಲಕಿಯಾರದ್ದೇ ಮೇಲುಗೈ. ಕೇರಳದ ತಿರುವನಂತಪುರಂನಲ್ಲಿ ಹೆಚ್ಚು ವಿದ್ಯಾರ್ಥಿಗಳು ಪಾಸ್ ಆಗಿದ್ದರೆ ಎಂದು ತಿಳಿದುಬಂದಿದೆ. ತಿರುವನಂತಪುರಂನಲ್ಲಿ ಶೇ.99.9ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಉತ್ತರ ಪ್ರದೇಶದ ಪ್ರಯಾಗ್ರಾಜ್ಗೆ ಕೊನೆಯ ಸ್ಥಾನದಲ್ಲಿದೆ. ಪ್ರಯಾಗ್ರಾಜ್ ವ್ಯಾಪ್ತಿಯಲ್ಲಿ ಶೇ.78ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಸಿಬಿಎಸ್ಇ ಬೋರ್ಡ್ ಪರೀಕ್ಷೆಯ ಫಲಿತಾಂಶಗಳನ್ನು ಘೋಷಿಸಿದ ನಂತರ, ಅಭ್ಯರ್ಥಿಗಳು cbse.gov.in, cbseresults.nic.in ಮತ್ತು results.cbse.nic.in ಸೇರಿದಂತೆ ಅಧಿಕೃತ ವೆಬ್‌ಸೈಟ್‌ಗಳಿಂದ ಸ್ಕೋರ್‌ಕಾರ್ಡ್ ಅನ್ನು ಪರಿಶೀಲಿಸಲು ಮತ್ತು ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ.

You cannot copy content from Baravanige News

Scroll to Top