ಬೆಂಗಳೂರು: ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುತ್ತಲೇ ಮುಂದಿನ ಸಿಎಂ ಯಾರಾಗಬೇಕು ಎಂಬ ಮಿಲಿಯನ್ ಡಾಲರ್ ಪ್ರಶ್ನೆ ಕೇಳಿಬಂದಿದ್ದು, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಸಿಎಂ ಗಾದಿಗಾಗಿ ಭಾರೀ ಪೈಪೋಟಿ ನಡೆಯುತ್ತಿದೆ.
ರಾತ್ರೋರಾತ್ರಿ ಸಿದ್ದರಾಮಯ್ಯ ಮತ್ತು ಡಿಕೆಶಿ ಮನೆಗಳ ಮುಂದೆ ಅವರ ಬೆಂಬಲಿಗರು ದೊಡ್ಡ ದೊಡ್ಡ ಫ್ಲೆಕ್ಸ್ ಹಾಕಿದ್ದಾರೆ. ಈ ಫ್ಲೆಕ್ಸ್ ರಾಜಕೀಯ ಕಾಂಗ್ರೆಸ್‍ನಲ್ಲಿ ಸಂಚಲನ ಮೂಡಿಸಿವೆ.. ಈ ನಡುವೆ, ತಾನೆ ಮುಂದಿನ ಸಿಎಂ ಆಗೋ ಸಂದೇಶವನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇರವಾಗಿ ರವಾನೆ ಮಾಡಿದ್ದಾರೆ. ತಾವು ಈ ಹಿಂದೆ ಸಹಕಾರ ಕೊಟ್ಟ ಮಾದರಿಯಲ್ಲಿಯೇ ಸಿದ್ದರಾಮಯ್ಯ ಅವರು ಈಗ ತಮಗೆ ಸಹಕಾರ ಕೊಡುವ ವಿಶ್ವಾಸವಿದೆ ಎಂದಿದ್ದಾರೆ.
ಹೈಕಮಾಂಡ್ ಲೆಕ್ಕಾಚಾರ – 01
ಸಿದ್ದರಾಮಯ್ಯ ಸಿಎಂ ಆದಲ್ಲಿ ನಾಲ್ಕು ಡಿಸಿಎಂ ಹುದ್ದೆ ಸೃಷ್ಟಿಸಲಾಗುತ್ತದೆ. ಲಿಂಗಾಯತ+ಒಕ್ಕಲಿಗ+ದಲಿತ+ಮುಸ್ಲಿಂ ನಾಯಕರಿಗೆ ಡಿಸಿಎಂ ಹುದ್ದೆ ನೀಡಲಾಗುತ್ತದೆ.
ಹೈಕಮಾಂಡ್ ಲೆಕ್ಕಾಚಾರ – 02
ಡಿಕೆ ಶಿವಕುಮಾರ್ ಸಿಎಂ ಆದಲ್ಲಿ ನಾಲ್ಕು ಡಿಸಿಎಂ ಹುದ್ದೆ ಸೃಷ್ಟಿಸಿ, ಲಿಂಗಾಯತ+ಕುರುಬ+ದಲಿತ+ಮುಸ್ಲಿಂ ನಾಯಕರಿಗೆ ಪಟ್ಟ ನೀಡಲಾಗುತ್ತದೆ.
ಹೈಕಮಾಂಡ್ ಲೆಕ್ಕಾಚಾರ – 03
ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಬದಲು ಬೇರೆಯವರು ಸಿಎಂ ಆದಲ್ಲಿ ಜಾತಿ ಆಧಾರಿತವಾಗಿ ಬೇರೆ ಬೇರೆ ಸೂತ್ರ ಹೆಣೆಯಲಾಗುತ್ತದೆ.