ಮಲ್ಪೆ: ಒಡಿಶಾ ಮೂಲದ ಮೀನುಗಾರ ಬೋಟಿನಿಂದ ಆಯತಪ್ಪಿ ಬಿದ್ದು ನೀರಿನಲ್ಲಿ ಕಣ್ಮರೆಯಾಗಿರುವ ಬಗ್ಗೆ ದೂರು ದಾಖಲಾಗಿದೆ.
ಒಡಿಶಾದ ಮಜಾಯಿ ಮಜಿ (31) ನಾಪತ್ತೆಯಾಗಿದ್ದು, ಆತ ಮಲ್ಪೆಯ ದಯಾಲಕ್ಷ್ಮೀ ಬೋಟಿನಲ್ಲಿ ಮೇ 8ರಂದು ಇತರರೊಂದಿಗೆ ಮೀನುಗಾರಿಕೆಗೆ ತೆರಳಿದ್ದ.
ಮೇ 11ರಂದು ರಾತ್ರಿ ಸುಮಾರು 60 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆ ನಡೆಸುವಾಗ ಆಯತಪ್ಪಿ ಬೋಟಿನಿಂದ ನೀರಿಗೆ ಬಿದ್ದು ಮುಳುಗಿ ನಾಪತ್ತೆಯಾಗಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.