ವಿವಾದಿತ ‘ದಿ ಕೇರಳ ಸ್ಟೋರಿ’ ಸಿನಿಮಾ ರಿಲೀಸ್ ಆಗಿ ಬಾಕ್ಸ್ ಆಫೀಸ್ನಲ್ಲಿ ಭಾರೀ ಗಳಿಕೆ ಮಾಡುತ್ತಿದೆ. ಸೂಕ್ಷ್ಮ ವಿಷಯದ ಮೇಲೆ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದ್ದು ನಟಿ ಅದಾ ಶರ್ಮಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾ ನೋಡಲು ಪ್ರೇಕ್ಷಕರು ಥಿಯೇಟರ್ ಗಳಲ್ಲಿ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಇದರ ನಡುವೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಡೀ ಚಿತ್ರಮಂದಿರವನ್ನು 3 ದಿನ ಬುಕ್ ಮಾಡಿ ಹಿಂದುಗಳಿಗೆ ಉಚಿತ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿಜಯಪುರ ನಗರದ ಅಪ್ಸರಾ ಚಿತ್ರಮಂದಿರವನ್ನು 3 ದಿನ ಬುಕ್ ಮಾಡಿದ್ದಾರೆ. ಈ ಥಿಯೇಟರ್ನಲ್ಲಿ ದಿ ಕೇರಳ ಸ್ಟೋರಿ ಸಿನಿಮಾವನ್ನು ನೋಡ ಬಯಸುವ ಹಿಂದುಗಳು ಮೇ 16 ರಿಂದ ಮೇ 19ರವರೆಗೆ ಉಚಿತವಾಗಿ ದಿನ 2 ಶೋ ನೋಡಬಹುದು. ಮಧ್ಯಾಹ್ನ 12 ಗಂಟೆ ಶೋ ಹಾಗೂ ಮಧ್ಯಾಹ್ನ 3ಗಂಟೆ ಶೋ ಮಾತ್ರ ವೀಕ್ಷಣೆಗೆ ಅವಕಾಶವಿದೆ ಎಂದು ಶಾಸಕರು ಮನವಿ ಮಾಡಿದ್ದಾರೆ.