(ಮೇ.25) ಪುತ್ತಿಗೆ ಮಠ ಪರ್ಯಾಯದ ಅಕ್ಕಿ ಮುಹೂರ್ತ

ಉಡುಪಿ: ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಮ್ಮ ಶಿಷ್ಯರಾದ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರೊಡಗೂಡಿ ನಡೆಸಲಿರುವ ಚತುರ್ಥ ಶ್ರೀಕೃಷ್ಣ ಪೂಜಾ ಪರ್ಯಾಯದ ದ್ವಿತೀಯ ಮುಹೂರ್ತವಾದ “ಅಕ್ಕಿ ಮುಹೂರ್ತ’ವು ಮೇ 25ರ ಬೆಳಗ್ಗೆ 8.45ಕ್ಕೆ ಶ್ರೀ ಪುತ್ತಿಗೆ ಮಠದಲ್ಲಿ ನೆರವೇರಲಿದೆ.

ಪೂರ್ವಾಹ್ನ 7.30ಕ್ಕೆ ದೇವತಾ ಪ್ರಾರ್ಥನೆ-ಚಂದ್ರೇಶ್ವರ, ಅನಂತೇಶ್ವರ, ಶ್ರೀಕೃಷ್ಣ ದರ್ಶನ, 8ಕ್ಕೆ ಚಿನ್ನದ ಪಾಲಕಿಯಲ್ಲಿ ಶ್ರೀಮುಡಿ ಮೆರವಣಿಗೆ, 8.45ಕ್ಕೆ ತಂಡುಲ ಸಂಗ್ರಹ, 9ಕ್ಕೆ ವಿವಿಧ ಸಂಘ-ಸಂಸ್ಥೆಗಳಿಂದ ಅಕ್ಕಿ ಸಂಗ್ರಹ ಸಂಕಲ್ಪ, 9.30ಕ್ಕೆ ಪುತ್ತಿಗೆ ಶ್ರೀಗಳಿಂದ ಆಶೀರ್ವಚನ, 10ಕ್ಕೆ ಫ‌ಲ-ಮಂತ್ರಾಕ್ಷತೆ ಜರಗಲಿದೆ ಎಂದು ಮಠದ ಆಡಳಿತ ಮಂಡಳಿ ಪ್ರಕಟನೆ ತಿಳಿಸಿದೆ.

You cannot copy content from Baravanige News

Scroll to Top