RBIನಿಂದ ಮಹತ್ವದ ನಿರ್ಧಾರ; ಇನ್ಮುಂದೆ 2 ಸಾವಿರ ಮುಖಬೆಲೆಯ ನೋಟ್ ಚಲಾವಣೆ ಇಲ್ಲ

ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಸ್ತುತ ಚಲಾವಣೆಯಲ್ಲಿರೋ 2,000 ರೂ. ನೋಟುಗಳ ಬಗ್ಗೆ ಮಹತ್ವದ ಆದೇಶ ಹೊರಡಿಸಿದೆ. ಇನ್ಮುಂದೆ ಯಾವುದೇ ಕಾರಣಕ್ಕೂ ಬ್ಯಾಂಕ್​​ಗಳು 2,000 ರೂ. ನೋಟುಗಳ ವಿತರಣೆ ಮಾಡಬಾರದು ಎಂದು ಆದೇಶಿಸಿದೆ. ಹೀಗಾಗಿ ಜನಸಾಮಾನ್ಯರ ಬಳಿ ಇರೋ 2 ಸಾವಿರ ನೋಟುಗಳ ಬದಲಾವಣೆಗೆ ಮೇ 23ನೇ ತಾರೀಕಿನಿಂದ ಸೆಪ್ಟೆಂಬರ್​​​​ 30ನೇ ತಾರೀಕುವರೆಗೂ ಅವಕಾಶ ಮಾಡಿಕೊಡಲಾಗಿದೆ.

ಈ ಹಿಂದೆಯೇ ಭಾರತದ ಅತ್ಯಂತ ಮೌಲ್ಯಯುತ ಕರೆನ್ಸಿ ನೋಟು ರೂ 2,000 ನೋಟುಗಳ ಚಲಾವಣೆ ತೀವ್ರವಾಗಿ ಕುಸಿತ ಕಂಡಿತ್ತು. ಈಗಂತೂ ಮಾರುಕಟ್ಟೆಯಲ್ಲಿ 2000 ರೂ. ನೋಟುಗಳ ಚಲಾವಣೆ ತುಂಬಾ ಕಡಿಮೆ ಆಗಿದೆ. ಈ ಹೊತ್ತಲ್ಲೇ ಆರ್​ಬಿಐ ಈ ನಿರ್ಧಾರ ತೆಗೆದುಕೊಂಡಿದೆ. ಒಂದು ಬಾರಿ ಕೇವಲ 20 ಸಾವಿರವರೆಗೂ ಎಕ್ಸ್​ಚೇಂಜ್​​ ಮಾಡಲು ಅವಕಾಶ ನೀಡಲಾಗಿದೆ ಎಂದು ಆರ್​ಬಿಐ ಆದೇಶದಲ್ಲಿ ತಿಳಿಸಲಾಗಿದೆ.

Scroll to Top