RSS ರಾಷ್ಟ್ರಧ್ವಜವನ್ನು 52 ವರ್ಷ ಅವಮಾನಿಸಿದೆ : ರಾಹುಲ್ ಗಾಂಧಿ ಕಿಡಿ

ಹುಬ್ಬಳ್ಳಿ: ಆರ್ ಎಸ್ ಎಸ್ ತನ್ನ ಪ್ರಧಾನ ಕಚೇರಿಯಲ್ಲಿ 52 ವರ್ಷಗಳ ಕಾಲ ತ್ರಿವರ್ಣ ಧ್ವಜವನ್ನು ಏಕೆ ಹಾರಿಸಲಿಲ್ಲ? ಖಾದಿಯಿಂದ ರಾಷ್ಟ್ರಧ್ವಜ ತಯಾರಿಸುವವರ ಬದುಕು ಏಕೆ ನಾಶವಾಗುತ್ತಿದೆ? ಚೀನಾದಿಂದ ತಯಾರಿಸಿದ ಯಂತ್ರ, ಪಾಲಿಯೆಸ್ಟರ್ ಧ್ವಜಗಳ ಆಮದನ್ನು ಏಕೆ ಅನುಮತಿಸಲಾಗಿದೆ?’ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ಮತ್ತು ಹಿರಿಯ ನಾಯಕ ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಅವರ 75ನೇ ಜನ್ಮದಿನಾಚರಣೆಯಲ್ಲಿ ಪಾಲ್ಗೊಳ್ಳಲು ಕರ್ನಾಟಕಕ್ಕೆ ಆಗಮಿಸಿದ್ದ ರಾಹುಲ್ ಗಾಂಧಿ ಹುಬ್ಬಳ್ಳಿಯ ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗಕ್ಕೆ ಭೇಟಿ ನೀಡಿ ತ್ರಿವರ್ಣ ಧ್ವಜ ನೇಯುವ ಕಾರ್ಮಿಕರನ್ನು ಭೇಟಿ ಮಾಡಿದರು.

ಬಳಿಕ ಫೆಸ್ ಬುಕ್ ನಲ್ಲಿ ಫೋಸ್ಟ್ ಬರೆದ ಅವರು, ‘ತಮ್ಮ ಪ್ರಚಾರವನ್ನು ಉತ್ತೇಜಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರ ‘ಹರ್ ಘರ್ ತಿರಂಗಾ’ ಅಭಿಯಾನ ಆರಂಭಿಸಿದ್ದಾರೆ. ಆರ್ ಎಸ್ ಎಸ್ ನಿರಂತರವಾಗಿ ತ್ರಿವರ್ಣ ಧ್ವಜವನ್ನು ಅವಮಾನಿಸುತ್ತಿದೆ. ತನ್ನ ಪ್ರಧಾನ ಕಚೇರಿಯಲ್ಲಿ 52 ವರ್ಷಗಳಿಂದ ತ್ರಿವರ್ಣ ಧ್ವಜವನ್ನು ಏಕೆ ಹಾರಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಆರ್ ಎಸ್ ಎಸ್ ಎನ್ನುವ ಒಂದು ಸಂಘಟನೆ 52 ವರ್ಷಗಳ ಕಾಲ ನಾಗುರದ ತನ್ನ ಪ್ರಧಾನ ಕಛೇರಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಿಲ್ಲ ಮತ್ತು ನಿರಂತರವಾಗಿ ತ್ರಿವರ್ಣ ಧ್ವಜವನ್ನು ಅವಮಾನಿಸಿತು. ಎಂದು ಪೋಸ್ಟ್ ನಲ್ಲಿ ಬರೆದಿದ್ದಾರೆ.

..

Scroll to Top