ಕಾಪು : ಜಯಗಳಿಸಿದ ಬಿಜೆಪಿ ಗುರ್ಮೆ ಸುರೇಶ್ ಶೆಟ್ಟಿ ಅದ್ದೂರಿ ವಿಜಯೋತ್ಸವ

ಉಡುಪಿ : ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅದ್ದೂರಿ ಗೆಲುವು ಸಾಧಿಸಿ, ಬಿಜೆಪಿಯಿಂದ ನೂತನ ಶಾಸಕರಾಗಿ ಆಯ್ಕೆಯಾಗಿರುವ ಗುರ್ಮೆ ಸುರೇಶ್ ಶೆಟ್ಟಿಯವರ ವಿಜಯೋತ್ಸವ ಕಾರ್ಯಕ್ರಮ ಇಂದು ನಡೆಯಿತು.

ಈ ವಿಜಯೋತ್ಸವದಲ್ಲಿ ಬಿಜೆಪಿ ಪ್ರಮುಖರು, ಕಾರ್ಯಕರ್ತರು ಭಾಗವಹಿಸಿದ್ದರು. ಇನ್ನು ಕಾಪು ತಾಲೂಕಿನ ಪಡುಕೆರೆಯಿಂದ ಆರಂಭಗೊಂಡ ಈ ವಿಜಯೋತ್ಸವ ಯಾತ್ರೆಯು ಕಟಪಾಡಿ, ಉದ್ಯಾವರ, ಶಿರ್ವ, ಪಡುಬಿದ್ರಿ ಮೂಲಕ ಸಾಗಿ ಬಳಿಕ ಕಾಪುವಿಗೆ ಬರಲಿದೆ.

ಕಾಪು ಕಳತ್ತೂರು ಸಭಾಭವನದಲ್ಲಿ ಗುರ್ಮೆ ಸುರೇಶ್ ಶೆಟ್ಟಿಯವರಿಗೆ ಅಭಿನಂದನೆ ನಡೆಯುವ ಮೂಲಕ ಕಾರ್ಯಕ್ರಮ ಸಮಾಪನಗೊಳ್ಳಲಿದೆ.

ಈ ವಿಜಯೋತ್ಸವದಲ್ಲಿ ಮಾಜಿ ಶಾಸಕರಾದ ಲಾಲಾಜಿ ಆರ್. ಮೆಂಡನ್, ಉಡುಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ಕಾಪು ತಾಲೂಕು ಅಧ್ಯಕ್ಷ ಶ್ರೀಕಾಂತ್ ನಾಯಕ್, ಮಹಿಳಾ ಮೋರ್ಚಾದ ಅಧ್ಯಕ್ಷ ವೀಣಾ ಶೆಟ್ಟಿ ಸೇರಿದಂತೆ ಹಲವಾರು ಮಂದಿ ಪಕ್ಷದ ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

You cannot copy content from Baravanige News

Scroll to Top