ಇಂದಿನಿಂದ ವಿ.ಹಿಂ.ಪ. ಬಜರಂಗದಳ ವತಿಯಿಂದ ಕೇರಳ ಸ್ಟೋರಿ ಚಿತ್ರದ ಪ್ರದರ್ಶನ : ರಾಜ್ಯದೆಲ್ಲೆಡೆ ಪೊಲೀಸರು ಅಲರ್ಟ್‌ – ಹಲವೆಡೆ ಮುನ್ನೆಚ್ಚರಿಕೆ..!!!

ಬೆಂಗಳೂರು : ಕೇರಳ, ಪಶ್ಚಿಮ ಬಂಗಾಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ವಿರೋಧ ವ್ಯಕ್ತವಾಗಿರುವ ಕೇರಳ ಸ್ಟೋರಿ ಚಿತ್ರದ ಪ್ರದರ್ಶನಕ್ಕೆ ಕರ್ನಾಟಕದಲ್ಲಿ ಪ್ರದರ್ಶನಕ್ಕೆ ಇಂದಿನಿಂದ ವಿಶ್ವ ಹಿಂದೂ ಪರಿಷತ್‌ ಹಾಗೂ ಭಜರಂಗದಳವು ವ್ಯವಸ್ಥೆ ಮಾಡಿದೆ.

ಇದು ಪ್ರತಿಭಟನೆಗೆ ಕಾರಣವಾಗುವ ಹಾಗೂ ಕೋಮು ಸೌಹಾರ್ಧತೆಗೆ ಧಕ್ಕೆ ತರುವ ಸಾಧ್ಯತೆ ಮನಗಂಡಿರುವ ರಾಜ್ಯ ಪೊಲೀಸರು ಇದೀಗ ಅಲರ್ಟ್ ಆಗಿದ್ದಾರೆ.

ಕೇರಳ ಸ್ಟೋರಿ ಪ್ರದರ್ಶನದಿಂದ ಸೃಷ್ಟಿಯಾಗಬಲ್ಲ ಪ್ರತಿಭಟನೆ, ಹಿಂಸಾಚಾರ ತಪ್ಪಿಸಲು ಎಡಿಜಿಪಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಿ ಎಲ್ಲ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಲಾಗಿದೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಬೆಳಗಾವಿ ಸೇರಿ ಎಲ್ಲ ಜಿಲ್ಲಾ ಎಸ್‌ಪಿಗಳು ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.

ಹಿಂದೂಪರ ಸಂಘಟನೆಗಳು ಚಲನಚಿತ್ರ ಪ್ರದರ್ಶನ ಮಾಡುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆ ಸಾಧ್ಯತೆ ಇರುವ ಕಾರಣ ಪೊಲೀಸರು ಸೂಕ್ತ ಭದ್ರತೆ ಹಾಗೂ ನಿಗಾವಹಿಸುವಂತೆ ಸೂಚನೆ ನೀಡಲಾಗಿದೆ. ಮಣಿಪಾಲ್‌ದ ಕೆನಾರಾ ಮಾಲ್‌ನಲ್ಲಿ ಸುರೇಶ್ ಮಂಡನ್ ನೇತೃತ್ವದಲ್ಲಿ ದಿ ಕೇರಳ ಸ್ಟೋರಿ ಚಿತ್ರಪ್ರದರ್ಶನ ಆಯೋಜಿಸಲಾಗಿದೆ.

You cannot copy content from Baravanige News

Scroll to Top