ಕರಾವಳಿಯ ಚಿತ್ರಕಾರ ಮಂಜುನಾಥ ಕಾಮತ್‌ಗೆ ಪ್ರಧಾನಿಯ ಮೆಚ್ಚುಗೆ

ಮೂಡುಬಿದಿರೆ: ಪ್ರಧಾನಿ ನರೇಂದ್ರ ಮೋದಿಯವರ “ಮನ್‌ ಕೀ ಬಾತ್‌’ ಬಾನುಲಿ ಸರಣಿಯ ಶತಕದ ಹಿನ್ನೆಲೆಯಲ್ಲಿ ಅದರ 100 ಆವೃತ್ತಿಗಳ ಸಾರಾಂಶವನ್ನು ಚಿತ್ರಿ ಸಲು ಆಹ್ವಾನಿತರಾದ ದೇಶದ 13 ಕಲಾವಿದರಲ್ಲಿ ಓರ್ವರಾಗಿದ್ದ ಅಂತಾರಾಷ್ಟ್ರೀಯ ಕಲಾವಿದ ಮೂಡು ಬಿದಿರೆಯ ಬಿ. ಮಂಜುನಾಥ ಕಾಮತ್‌ ಅವರ ಕಲಾಕೃತಿ ಪ್ರಧಾನಿಯವರ ಗಮನ ಸೆಳೆದಿದೆ.

ಕೇಂದ್ರ ಸಂಸ್ಕೃತಿ ಸಚಿವಾಲಯ ಈ ಯೋಜನೆಯನ್ನು ಕೈಗೊಂಡಿತ್ತು. ಕಲಾಕಾರರಿಗೆ ಮನ್‌ ಕೀ ಬಾತ್‌ ಸರಣಿಯ ಸಾರಾಂಶವನ್ನು 13 ಚಿಂತನೆಗಳಾಗಿ ನೀಡಲಾಗಿದ್ದು, ಇಲ್ಲಿ ರೂಪುಗೊಂಡ ಕಲಾಕೃತಿಗಳ ಪ್ರದರ್ಶನವನ್ನು ದಿಲ್ಲಿಯ ನ್ಯಾಶ ನಲ್‌ ಗ್ಯಾಲರಿ ಆಫ್‌ ಮಾಡರ್ನ್ ಆರ್ಟ್ಸ್ನಲ್ಲಿ “ಜನಶಕ್ತಿ ಒಂದು ಸಾಂಘಿಕ ಸಾಮರ್ಥ್ಯ’ ಹೆಸರಲ್ಲಿ ಪ್ರದರ್ಶಿಸಲಾಗಿತ್ತು. ಸ್ವತ್ಛತೆ, ಜಲ ಸಂರಕ್ಷಣೆ, ಕೃಷಿ, ಬಾಹ್ಯಾಕಾಶ, ಈಶಾನ್ಯ ಭಾರತ, ನಾರೀಶಕ್ತಿ, ಯೋಗ, ಆಯುರ್ವೇದ ಇತ್ಯಾದಿ ಆಯಾಮಗಳಿದ್ದವು.

ಮಂಜುನಾಥ್‌ ಅವರು ಬಂಟ್ವಾಳದ ಪುಂಡಲೀಕ ಕಾಮತ್‌- ಪ್ರಫ‌ುಲ್ಲಾ ದಂಪತಿಯ ಪುತ್ರ. ಮಂಜುನಾಥ ಕಾಮತ್‌ ಹುಟ್ಟೂರಿನ ಭಾಗದಲ್ಲಿ “ಆರ್ಟಿಸ್ಟ್‌ ರೆಸಿಡೆನ್ಸಿ’ ಸ್ಥಾಪಿಸಿ ಕಲೆ, ಸಾಹಿತ್ಯ, ಆಡಳಿತ, ಸಂಸ್ಕೃತಿ ವಿಷಯದಲ್ಲಿ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ದೂರಗಾಮಿ ಚಿಂತನೆ ಹೊಂದಿದ್ದಾರೆ.

ವಸುಧೈವ ಕುಟುಂಬಕಂ ಎಂಬ ಪರಿಕಲ್ಪನೆ
ವರಾಹ ಅವತಾರದಲ್ಲಿ ವ್ಯಕ್ತವಾದ ಭೂಮಿ ಗುಂಡಗಿರುವ ಪರಿಕಲ್ಪನೆ, ಗ್ರಹಣಗಳ ಕಲ್ಪನೆ, ವಿಶ್ವರೂಪಿ ಪರಮಾತ್ಮನ ಚಿತ್ರಣ, ದೈವೀಕಶಕ್ತಿಯನ್ನು ಹೊಂದಿರುವ ಭಾರತ ಹೇಗೆ ವಿಶ್ವಗುರು ಆಯಿತು ಎಂಬಿತ್ಯಾದಿ ವಿವರಗಳೊಂದಿಗೆ ಕಲಾಕೃತಿ ರಚಿಸಿರುವುದನ್ನು ಮೋದಿಜಿಯವರು ಪರಿವೀಕ್ಷಿಸಿ, ಅಲ್ಲಿರುವ ಸೂಕ್ಷ್ಮಗಳನ್ನು ಕೇಳಿ ತಿಳಿದುಕೊಂಡರು ಎನ್ನುತ್ತಾರೆ ಮಂಜುನಾಥ.

Scroll to Top