ಶಿರ್ವ: ರೈಲ್ವೆ ಟಿಕೇಟ್‌ ವಿಚಾರದಲ್ಲಿ ಹಲ್ಲೆ; ಪ್ರಕರಣ ದಾಖಲು

ಶಿರ್ವ: ರೈಲ್ವೆ ಟಿಕೇಟ್‌ ವಿಚಾರದಲ್ಲಿ ಯುವಕರಿಬ್ಬರು ಟ್ರಾವೆಲ್‌ ಏಜನ್ಸಿಯಾಗಿ ಕೆಲಸ ನಿರ್ವಹಿಸುತ್ತಿರುವ ಕಚೇರಿಗೆ ಅಕ್ರಮ ಪ್ರವೇಶ ಮಾಡಿ ಮಾಲಿಕ ಗಣೇಶ್‌ ಕುಮಾರ್‌ಗೆ ಹಲ್ಲೆ ನಡೆಸಿದ ಘಟನೆ ಮೇ. 23 ರಂದು ಮಧ್ಯಾಹ್ನ ನಡೆದಿದೆ.

ಶಿರ್ವ ಮಂಚಕಲ್‌ ಪೇಟೆಯ ಮುಖ್ಯ ರಸ್ತೆಯ ಬದಿಯಲ್ಲಿರುವ ನಿಸರ್ಗ ಸರ್ವಿಸಸ್‌ ಟ್ರಾವೆಲ್‌ ಏಜನ್ಸಿ ಕಚೇರಿಗೆ ಮೇ. 21ರಂದು ಗ್ರಾಹಕರಾಗಿ ಬಂದ ಪಾದೂರಿನ ಸಂತೋಷ್‌ ಶೆಟ್ಟಿ ಮತ್ತು ಅಭಿಷೇಕ್‌ ಶೆಟ್ಟಿ ಮೇ 22 ರಂದು ಮುಂಬೈಗೆ ತೆರಳಲು 2 ಟಿಕೇಟ್‌ ಬುಕ್‌ ಮಾಡಿ ಟಿಕೇಟ್‌ನ ಹಣ ರೂ.3200/- ಪಾವತಿಸಿದ್ದರು.

ಬುಕ್‌ ಮಾಡಿದ ಟಿಕೇಟ್‌ ವೈಟಿಂಗ್‌ ಲಿಸ್ಟ್‌ನಲ್ಲಿದ್ದು ಮೇ. 22 ರಂದು ಟಿಕೇಟ್‌ ಕನ್ಫರ್ಮ್ ಆಗದೇ ಇರುವುದರಿಂದ ಕ್ಯಾನ್ಸಲ್‌ ಮಾಡಲು ತಿಳಿಸಿದ್ದರು. ಅದಾಗಲೇ ಟಿಕೇಟ್‌ ಚಾರ್ಟ್‌ ಆಗಿರುವುದರಿಂದ ಕ್ಯಾನ್ಸಲ್‌ ಮಾಡಲು ಆಗುವುದಿಲ್ಲ, ಮೂರು ದಿನ ಬಿಟ್ಟು ಕ್ಯಾನ್ಸಲೇಶನ್‌ ಹಣ ಕಟ್ಟಾಗಿ ನನ್ನ ಖಾತೆಗೆ ಜಮಾ ಆಗುತ್ತದೆ ಎಂದು ತಿಳಿಸಿದ ಗಣೇಶ್‌ ಮೇ. 22 ರಂದು ರೂ. 2500/- ಸಂತೋಷ್‌ ಶೆಟ್ಟಿಗೆ ಪಾವತಿಸಿದ್ದಾರೆ. ಉಳಿದ ಹಣವನ್ನು 2 ದಿನ ಬಿಟ್ಟು ಗೂಗಲ್‌ ಪೇ ಮಾಡುವುದಾಗಿ ತಿಳಿಸಿದಾಗ ಅವರು ಒಪ್ಪಿದ್ದು, ಅಲ್ಲಿಂದ ತೆರಳಿದ್ದಾರೆ.

You cannot copy content from Baravanige News

Scroll to Top