ಬಿಪಿಎಲ್ ಕಾರ್ಡ್ಗೆ ಫುಲ್ ಡಿಮ್ಯಾಂಡ್: ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ಮುಂದಾದ ಜನ

ಬೆಂಗಳೂರು : ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ಜನರು ಸೈಬರ್ ಸೆಂಟರ್ಗಳತ್ತ ಮುಖ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ಬಿಪಿಎಲ್ ಕಾರ್ಡ್ ಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚಾಗಿದೆ.

ರಾಜ್ಯದಲ್ಲಿ ಪ್ರತಿದಿನ 500ಕ್ಕೂ ಜನ ಹೆಚ್ಚು ಅರ್ಜಿಗಳು ಸಲ್ಲಿಕೆ ಮಾಡಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಸರ್ಕಾರದ ಹಲವು ಭಾಗ್ಯ, ಗ್ಯಾರಂಟಿ ಘೋಷಣೆ ಹಿನ್ನೆಲೆ ಬಿಪಿಎಲ್ ಕಾರ್ಡ್ ಹೊಂದಿರಬೇಕು ಎಂಬ ಮಾನದಂಡ‌ ಕಾರಣ ಇದೀಗ ಸರ್ಕಾರದ ಉಚಿತ ಸ್ಕೀಂ ಪಡೆಯಲು ಮುಗಿಬಿದ್ದ ಬಡ, ಮಧ್ಯಮ ವರ್ಗದ ಜನತೆ ಮುಂದಾಗಿದ್ದಾರೆ.

ಕಳೆದೆರಡು ವರ್ಷದಿಂದ ಇಲ್ಲಿಯವರೆಗೆ 2.87 ಲಕ್ಷ ಬಿಪಿಎಲ್ ಕಾರ್ಡ್, 46,576 ಎಪಿಎಲ್ ಕಾರ್ಡ್ಗೆ ಅರ್ಜಿ ಸಲ್ಲಿಸಲಾಗಿದೆ. ಇಲ್ಲಿಯವರೆಗೆ 4 ಕೋಟಿ ಜನರಿಗೆ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಹಂಚಿಕೆ ಮಾಡಲಾಗಿದೆ.

ಸದ್ಯ ರಾಷ್ಟ್ರೀಯ ಆಹಾರ ಹಕ್ಕು ಕಾಯಿದೆ ಮಿತಿ ತಲುಪಿರುವ ಕರ್ನಾಟಕ‌ ರಾಜ್ಯ, ಇನ್ಮುಂದೆ BPL ಕಾರ್ಡ್ ನೀಡಲು ಹಣಕಾಸು ಇಲಾಖೆ ಅನುಮತಿ ಅಗತ್ಯವಾಗಿದೆ.

You cannot copy content from Baravanige News

Scroll to Top