ಪ್ರಧಾನಿ ನರೇಂದ್ರ ಮೋದಿ ಅವರಿಂದ ಹೊಸ ಸಂಸತ್‌ ಭವನ ಲೋಕಾರ್ಪಣೆ : ಸ್ಮರಣಾರ್ಥ 75 ರೂ. ನಾಣ್ಯ ಬಿಡುಗಡೆ

ನೂತನ ಸಂಸತ್ ಭವನ ಉದ್ಘಾಟನೆಗೆ ಸಜ್ಜಾಗಿದೆ. ಭಾನುವಾರ ಹೊಸ ಸಂಸತ್ ಭವನದ ಲೋಕಾರ್ಪಣೆಯಾಗ್ತಿದೆ. ಇದರ ನೆನಪಿಗಾಗಿ ಕೇಂದ್ರ ಸರ್ಕಾರ 75 ರೂ.ನ ನಾಣ್ಯ ಬಿಡುಗಡೆಯಾಗಲಿದೆ.



2020ರ ಡಿಸೆಂಬರ್ನಲ್ಲಿ ಆರಂಭವಾಗಿದ್ದ ನಿರ್ಮಾಣ ಕಾರ್ಯ ಎರಡೂವರೆ ವರ್ಷಗಳ ಬಳಿಕ ಮುಗಿದಿದೆ. ಸುಮಾರು 862 ಕೋಟಿ ರೂ. ವೆಚ್ಚದಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗಿರುವ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.

ಸಂಸತ್ ಭವನ ಉದ್ಘಾಟನೆಯನ್ನು ಹಲವು ವಿಪಕ್ಷಗಳು ಬಹಿಷ್ಕಾರ ಮಾಡಿವೆ.



ನೂತನ ಕಟ್ಟಡಕ್ಕೆ ಚಾಲನೆ ನೀಡಲಿರುವ ನಮೋ


20 ವಿಪಕ್ಷಗಳ ಬಹಿಷ್ಕಾರದ ನಡುವೆ ಪ್ರಧಾನಿ ನರೇಂದ್ರ ಮೋದಿ ನೂತನ ಸಂಸತ್ ಭವನವನ್ನು ಭಾನುವಾರು ಉದ್ಘಾಟಿಸಲಿದ್ದಾರೆ. ಸುಮಾರು 25 ಪಕ್ಷಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿವೆ.. ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರು ಕೂಡ ಸಂಸತ್ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗುವುದಾಗಿ ಹೇಳಿದ್ದಾರೆ.



75 ನಾಣ್ಯದ ವಿಶೇಷತೆ

ನಾಣ್ಯದ ಒಂದು ಬದಿಯಲ್ಲಿ ಅಶೋಕ ಸ್ಥಂಭದ ಸಿಂಹದಮುಖ
ನಾಣ್ಯದ ಕೆಳಗಡೆ ಸತ್ಯಮೇವ ಜಯತೆ ಎಂದು ಬರೆಯಲಾಗಿದೆ.
ಎಡಗಡೆ ಭಾರತ್‌ ಎಂದು ದೇವನಾಗರಿ ಲಿಪಿಯಲ್ಲಿ ಬರೆಯಲಾಗಿದೆ. ಬಲಗಡೆ ಇಂಡಿಯಾ ಎಂದು ಇಂಗ್ಲಿಷನ್ನಲ್ಲಿ ಉಲ್ಲೇಖಿಸಲಾಗಿದೆ. ನಾಣ್ಯದ ಮತ್ತೊಂದು ಬದಿ ನೂತನ ಸಂಸತ್‌ ಸಂಕೀರ್ಣದ ಚಿತ್ರ ಕೆಳಭಾಗದಲ್ಲಿ ಸಂಸತ್‌ ಸಂಕಲ್ಪ ಎಂದು ದೇವನಾಗರಿ ಲಿಪಿ ಬರಹ., ಬಲ ಬದಿ ಪಾರ್ಲಿಮೆಂಟ್‌ ಕಾಂಪ್ಲೆಕ್ಸ್‌ ಅಂತ, ಇಂಗ್ಲಿಷನ್ನಲ್ಲಿ ಮುದ್ರಣ ನಾಣ್ಯದ ತೂಕ 35 ಗ್ರಾಂ, ನಾಣ್ಯದ ಸುತ್ತಳತೆ 44 ಮಿಲಿ ಮೀಟರ್‌
ನಾಣ್ಯ ಶೇ.50ರಷ್ಟು ಬೆಳ್ಳಿ, 40ರಷ್ಟು ತಾಮ್ರ, ಶೇ.5ರಷ್ಟು ಮಿಶ್ರಲೋಹ ರಾಷ್ಟ್ರಪತಿ ಬದಲು ಪ್ರಧಾನಿ ಮೋದಿ ಸಂಸತ್ ಭವನ ಉದ್ಘಾಟನೆ ಪ್ರಶ್ನಿಸಿ ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಈ ಬಗ್ಗೆ ಮಧ್ಯಪ್ರವೇಶಿಸಲು ಕೋರ್ಟ್ ನಿರಾಕರಿಸಿದೆ. ಒಟ್ಟಿನಲ್ಲಿ ವಿಪಕ್ಷಗಳ ಬಹಿಷ್ಕಾರದ ನಡುವೆ ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭ ಆಯೋಜನೆಗೊಂಡಿದೆ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೇಂದ್ರ ಸರ್ಕಾರ ಸಕಲ ರೀತಿಯಲ್ಲೂ ಸಜ್ಜಾಗಿದೆ.

You cannot copy content from Baravanige News

Scroll to Top