ಫೈನಲ್ ಪಂದ್ಯಕ್ಕೂ ಮೊದಲೇ BCCIನಿಂದ ಧೋನಿಗೆ ವಿಶೇಷ ಗೌರವ : ರೋಮಾಂಚನ ನೀಡೋ ವೀಡಿಯೋ

ಧೋನಿ ಅಂದರೆ ವಿಶೇಷ ಅಭಿಮಾನ.. ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ನೆಲೆಸಿದ್ದಾರೆ. ಮೈದಾನದ ಪೆವಿಲಿಯನ್​ನಲ್ಲಿ ಕೂತ ವೀಕ್ಷಕರು ‘ಧೋನಿ, ಧೋನಿ’ ಅಂದರೆ ಸಾಕು ಮೈಯೆಲ್ಲ ರೋಮಾಂಚನ.. ಅದೇಷ್ಟೇ ಹೇಟರ್ಸ್​​ಗಳಿದ್ದರೂ ಅವರನ್ನೂ ಪುಳುಕಿತರಾಗುವಂತೆ ಮಾಡುತ್ತದೆ. ಅಷ್ಟರ ಮಟ್ಟಿಗೆ ಇದೆ ಧೋನಿಯ ಚರಿತ್ರೆ.

ಬಹುಶಃ ಐಪಿಎಲ್​ ಸುದ್ದಿ ಎಲ್ಲಿಯೇ ಚರ್ಚೆಗೆ ಬಂದರೂ ಧೋನಿ ಹೆಸರು ಬರದೇ ಅಂತ್ಯಗೊಂಡಿದ್ದೇ ಇಲ್ಲವೇನೋ!!

ಮೈದಾನದಲ್ಲಿ ಶಾಂತವಾಗಿಯೇ ‘ವಿನ್ನಿಂಗ್ ಗೇಮ್’ ಆಡುವ ಧೋನಿಯನ್ನು ‘ಕ್ಯಾಪ್ಟನ್ ಕೂಲ್’ ಎಂದು ಬಣ್ಣಿಸಲಾಗುತ್ತದೆ. ಕಳೆದ ಐಪಿಎಲ್ ಆವೃತ್ತಿಯಲ್ಲಿ 9ನೇ ಸ್ಥಾನದಲ್ಲಿದ್ದ ಸಿಎಸ್​ಕೆ ಈ ಬಾರಿ ಫೈನಲ್ ಪ್ರವೇಶ ಮಾಡಿದೆ. ಇದರ ಹಿಂದೆ ಧೋನಿಯ ಸಾಹಸ ಬಲು ರೋಚಕ. ಇಂದು 2023ರ ಐಪಿಎಲ್​ ಆವೃತ್ತಿಗೆ ತೆರೆಬೀಳಲಿದೆ.

ಅದು, ಸಿಎಸ್​ಕೆ ಮತ್ತು ಗುಜರಾತ್ ತಂಡಗಳು ಸೆಣಸಾಡುವ ಮೂಲಕ. ಇಲ್ಲಿ ಯಾರು ಗೆಲ್ಲುತ್ತಾರೋ ಅವರು ಐಪಿಎಲ್​​ ಟ್ರೋಫಿಗೆ ಮುತ್ತಿಡಲಿದ್ದಾರೆ.
ಇನ್ನು ಪಂದ್ಯ ಆರಂಭಕ್ಕೂ ಮೊದಲು ಮಿಸ್ಟರ್ ಕೂಲ್ ಕ್ಯಾಪ್ಟನ್​ಗೆ ಬಿಸಿಸಿಐ ವಿಶೇಷ ಗೌರವನ್ನು ಸಲ್ಲಿಸಿದೆ.

ಮಹೇಂದ್ರ ಸಿಂಗ್ ಧೋನಿಗೆ ಸಂಬಂಧಿಸಿದ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಧೋನಿ ಅಂದರೆ ಕ್ರಿಕೆಟ್ ಅಭಿಮಾನಿಗಳಿಗೆ ಇರುವ ಅಭಿಮಾನ, ಕ್ರೇಜ್ ಎಲ್ಲವನ್ನೂ ಈ ವೀಡಿಯೋದಲ್ಲಿ ತೋರಿಸಲಾಗಿದೆ. ಭಾವನಾತ್ಮಕ ವೀಡಿಯೋ ಇದಾಗಿದ್ದು, ವೀಕ್ಷಕರನ್ನು ರೋಮಾಂಚನಗೊಳಿಸುತ್ತದೆ.

You cannot copy content from Baravanige News

Scroll to Top