ವಾಟ್ಸ್ಆ್ಯಪ್ನಿಂದ ಅಚ್ಚರಿಯ ಅಪ್ಡೇಟ್: ಇನ್ಮುಂದೆ ಸ್ಕ್ರೀನ್‌ ಶೇರ್ ಮಾಡಬಹುದು

ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ಗೆ ಈಗ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ಯಾರ ಬಳಿ ಸ್ಮಾರ್ಟ್ಫೋನ್ ಇದೆಯೋ ಅವರ ಬಳಿಯೆಲ್ಲ ವಾಟ್ಸ್ಆ್ಯಪ್ ಇದ್ದೇ ಇದೆ. ತನ್ನ ಬಳಕೆದಾರರ ಪ್ರೈವಸಿ ವಿಚಾರವಾಗಿ ಹೆಚ್ಚು ಗಮನ ಹರಿಸುತ್ತಿರುವುದರಿಂದ ಇದು ಸೇಫ್ ಕೂಡ ಆಗಿದೆ. ಕೇವಲ ಭಾರತದಲ್ಲೇ ಸುಮಾರು 550 ಮಿಲಿಯನ್ ಯೂಸರ್ಸ್ ಅನ್ನು ಈ ಆ್ಯಪ್ ಹೊಂದಿದೆ. ಕ್ಷಣಾರ್ಧದಲ್ಲಿ ಸಂದೇಶಗಳ ಮೂಲಕ ಮಾತುಕತೆ ನಡೆಸಲು ಉಪಯೋಗಿಸುವ ವಾಟ್ಸ್ಆ್ಯಪ್ ಸಾಲು ಸಾಲು ಫೀಚರ್ಗಳನ್ನು ಪರಿಚಯಿಸುತ್ತದೆ. ಇದೀಗ ಹೊಸ ಅಪ್ಡೇಟ್ ಕುರಿತು ವಾಟ್ಸ್ಆ್ಯಪ್ ಒಂದು ಸುದ್ದಿ ಪ್ರಕಟಿಸಿದೆ.

ಇದರ ಮೂಲಕ ಬಳಕೆದಾರರು ವೀಡಿಯೋ ಕರೆಯಲ್ಲಿ ಹೊಸ ಅನುಭವವನ್ನು ಪಡೆಯಬಹುದು.

ಕೆಲವೇ ದಿನಗಳಲ್ಲಿ ವಾಟ್ಸ್ಆ್ಯಪ್ ತನ್ನ ಆಂಡ್ರಾಯ್ಡ್ ಬಳಕೆದಾರರಿಗೆ ವಿಡಿಯೋ ಕರೆ ಸಮಯದಲ್ಲಿ ತಮ್ಮ ಸ್ಕ್ರೀನ್‌ ಅನ್ನು ಸುಲಭವಾಗಿ ಶೇರ್ ಮಾಡಬಹುದಾದ ಆಯ್ಕೆಯನ್ನು ನೀಡುತ್ತಿದೆ. ಬಳಕೆದಾರರು ಕರೆ ನಿಯಂತ್ರಣ ವೀಕ್ಷಣೆಯಲ್ಲಿ ಹೊಸ ಐಕಾನ್ ಅನ್ನು ಕಾಣುತ್ತಾರೆ. ಅದನ್ನು ಬಳಸಿಕೊಂಡು ಅವರ ಸ್ಕ್ರೀನ್‌ ಅನ್ನು ಶೇರ್‌ ಮಾಡಲು ಪ್ರೇರೇಪಿಸಲಾಗುತ್ತದೆ. ಸ್ಕ್ರೀನ್‌ ಅನ್ನು ಶೇರ್ ಮಾಡಿದಾಗ ರೆಕಾರ್ಡ್ ಮಾಡಲಾಗುತ್ತದೆ ಮತ್ತು ಸ್ವೀಕರಿಸುವವರೊಂದಿಗೆ ಹಂಚಿಕೊಳ್ಳಲಾಗುತ್ತದೆ. ಈ ಆಯ್ಕೆಯು ಆಂಡ್ರಾಯ್ಡ್‌ ಆವೃತ್ತಿ ಸಂಖ್ಯೆ 2.23.11.19 ಗಾಗಿ ವಾಟ್ಸ್ಆ್ಯಪ್ ಬೀಟಾದೊಂದಿಗೆ ಬರುತ್ತದೆ. ಹೀಗಾಗಿ ಪ್ರಸ್ತುತ ಆಂಡ್ರಾಯ್ಡ್‌ ಬೀಟಾ ಪರೀಕ್ಷಕರಿಗೆ ಲಭ್ಯವಿದೆ. ಸದ್ಯದಲ್ಲೇ ಎಲ್ಲ ಆಂಡ್ರಾಯ್ಡ್ ಬಳಕೆದಾರರಿಗೆ ಸಿಗಲಿದೆ.

ವಾಟ್ಸ್ಆ್ಯಪ್ ಎಡಿಟ್ ಸೆಂಟ್ ಮೆಸೇಜ್ ಎಂಬ ನೂತನ ಅಪ್ಡೇಟ್ ಪರಿಚಯಿಸುತ್ತಿದೆ. ಎಡಿಟ್ ಸೆಂಟ್ ಮೆಸೇಜ್ ಆಯ್ಕೆಯ ಮೂಲಕ ಕಳುಹಿಸದ ಮೆಸೇಜ್ ಅನ್ನು ಎಡಿಟ್ ಮಾಡಬಹುದಾಗಿದೆ. ಇದರ ಮೂಲಕ ಬಳಕೆದಾರರು ಯಾರಿಗಾದರೂ ಸಂದೇಶ ಕಳುಹಿಸಿದಾಗ ಅಕ್ಷರಗಳು ತಪ್ಪಾಗಿದ್ದಲ್ಲಿ, ಅದನ್ನು ಎಡಿಟ್ ಮಾಡಲು ಸಾಧ್ಯವಿದೆ. ಆದರೆ, ಇದಕ್ಕೆ 15 ನಿಮಿಷಗಳ ಕಾಲವಕಾಶ ಮಾತ್ರ ಇರುತ್ತದೆ. ಪ್ರಸ್ತುತ, ವಾಟ್ಸ್ಆ್ಯಪ್ನಲ್ಲಿ ಮೀಸಲಾದ ಎಡಿಟ್ ಆಯ್ಕೆ ಇಲ್ಲ. ಒಮ್ಮೆ ಕಳುಹಿಸಿದ ಮೆಸೇಜ್ ಅನ್ನು ಡಿಲೀಟ್ ಮಾತ್ರ ಮಾಡಬಹುದು, ಆದರೆ ಎಡಿಟ್‌ ಮಾಡಲು ಸಾಧ್ಯವಿಲ್ಲ. ಈ ವೈಶಿಷ್ಟ್ಯವನ್ನು ಬಳಸಿ ಮೆಸೇಜ್ ಕಳುಹಿಸಿದ ನಂತರ ಅವುಗಳನ್ನು ಎಡಿಟ್‌ ಮಾಡಲು ಸಾಧ್ಯವಾಗಿಸುತ್ತದೆ.

ಇಲ್ಲಿ ಗಮನಿಸ ಬೇಕಾದ ಸಂಗತಿ ಎಂದರೆ, ವಾಟ್ಸ್ಆ್ಯಪ್ನಲ್ಲಿ ನೀವು ಮೆಸೇಜ್ ಅನ್ನು ಡಿಲೀಟ್ ಮಾಡಿದರೆ ಹೇಗೆ ಚಾಟ್ನಲ್ಲಿ ಮಾಹಿತಿ ನೀಡುತ್ತದೆಯೊ ಅದೇರೀತಿ ಎಡಿಟ್ ಮಾಡಿದರೆ ಕೂಡ ಕಳುಹಿಸಿದವರಿಗೆ ತಿಳಿಯುತ್ತದೆ. ಈ ಎಡಿಟ್ ಬಟನ್ ವೈಶಿಷ್ಟ್ಯದ ಮೇಲೆ ವಾಟ್ಸ್ಆ್ಯಪ್ ಐದು ವರ್ಷಗಳ ಹಿಂದೆಯೇ ಗಮನಹರಿಸಲು ಆರಂಭಿಸಿದ್ದರೂ ಟ್ವಿಟರ್ನಲ್ಲಿ ಈ ಕುರಿತು ವರದಿ ಬಂದ ಬೆನ್ನಿಗೆ ಅದನ್ನು ಕೈಬಿಟ್ಟಿತ್ತು.

Scroll to Top