ಕಾಪು : ಐಪಿಎಲ್‌ ಗೆದ್ದ, ಸೋತ ತಂಡಗಳ ಬಗ್ಗೆ ವಾಟ್ಸ್‌ಆ್ಯಪ್‌ ಸ್ಟೇಟಸ್ : ಯುವಕನಿಗೆ ಹಲ್ಲೆ

ಕಾಪು: ಐಪಿಎಲ್‌ ಪಂದ್ಯಾಟದಲ್ಲಿ ಸಿಎಸ್‌ಕೆ ತಂಡ ಗೆದ್ದಿದ್ದಕ್ಕೆ ಸಂಭ್ರಮಿಸಿ ಮತ್ತು ಆರ್‌ಸಿಬಿ ತಂಡ ಸೋತದ್ದಕ್ಕೆ ಟ್ರೋಲ್‌ ಮಾಡಿ ವಾಟ್ಸ್‌ಆ್ಯಪ್‌ ಸ್ಟೇಟಸ್‌ ಹಾಕಿದ್ದ ಯುವಕನಿಗೆ ಯುವಕರ ತಂಡವೊಂದು ಹಲ್ಲೆ ನಡೆಸಿದ ಘಟನೆ ಮಲ್ಲಾರು ಕೊಂಬಗುಡ್ಡೆಯಲ್ಲಿ ನಡೆದಿದೆ.

ಮಲ್ಲಾರು ಕೊಂಬಗುಡ್ಡೆ ನಿವಾಸಿ ವರ್ಷಿತ್‌ ಪೂಜಾರಿ ಐಪಿಎಲ್‌ ಪಂದ್ಯಾಟದಲ್ಲಿ ಸಿಎಸ್‌ಕೆ ತಂಡ ಗೆದ್ದಿರುವ ಬಗ್ಗೆ ತನ್ನ ವಾಟ್ಸ್‌ಆ್ಯಪ್‌ ಸ್ಟೇಟಸ್‌ನಲ್ಲಿ ಹಾಕಿದ್ದು, ಜತೆಗೆ ಆರ್‌ಸಿಬಿ ಟೀಮ್‌ ಅನ್ನು ಟ್ರೋಲ್‌ ಮಾಡಿ ಪೋಸ್ಟ್‌ ಹಾಕಿದ್ದಕ್ಕೆ ರಾಘವೇಂದ್ರ ಎಂಬಾತ ಫೋನ್‌ ಕರೆ ಮಾಡಿ ಆಕ್ಷೇಪಿಸಿ, ಅವಾಚ್ಯ ಶಬ್ದಗಳಿಂದ ಬೈದು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದನು. ಜತೆಗೆ ವರ್ಷಿತ್‌ನ ತಂದೆ-ತಾಯಿ ಬಗ್ಗೆಯೂ ನಿಂದಿಸಿದ್ದು ನೀನು ನಾಳೆ ಗ್ರೌಂಡ್‌ಗೆ ಬಾ ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದನು. ಮೇ 26ರಂದು ರಾಘವೇಂದ್ರ ಮತ್ತೆ ಕರೆ ಮಾಡಿ ನಾನು ಗ್ರೌಂಡ್‌ನ‌ಲ್ಲಿದ್ದೇನೆ ನೀನು ಕೂಡಲೇ ಬಾ ಎಂದು ಹೇಳಿದ್ದು ಗ್ರೌಂಡ್‌ಗೆ ಹೋದಾಗ ಅಲ್ಲಿ ರಾಘವೇಂದ್ರ, ಸುಧೀರ ಮತ್ತಿತರರು ಜತೆಗೂಡಿ ಆರ್‌ಸಿಬಿ ಟೀಂ ವಿರುದ್ಧ ವಾಟ್ಸ್‌ಆ್ಯಪ್‌ನಲ್ಲಿ ಸ್ಟೇಟಸ್‌ಹಾಕುತ್ತಿಯಾ ಎಂದು ಬೈದು ಹಲ್ಲೆ ನಡೆಸಿರುವುದಾಗಿ ವರದಿಯಾಗಿದೆ.

ರಾಘವೇಂದ್ರ ವರ್ಷಿತ್‌ಗೆ ಹೊಡೆಯುತ್ತಿರುವುದನ್ನು ಕಂಡು ಗ್ರೌಂಡ್‌ನ‌ಲ್ಲಿ ಆಟವಾಡಲು ಬಂದಿದ್ದ ಸ್ವರೂಪ್‌, ವಿಕ್ಕಿ ಬರುವುದನ್ನು ಕಂಡು ಜೀವ ಬೆದರಿಕೆ ಹಾಕಿ ಅಲ್ಲಿಂದ ಹೊರಟು ಹೋಗಿದ್ದಾನೆ ಎಂದು ವರ್ಷಿತ್‌ ಕಾಪು ಪೊಲೀಸ್‌ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ವರ್ಷಿತ್‌ನನ್ನು ಸ್ವರೂಪ್‌ ಮತ್ತಿತರರು ಚಿಕಿತ್ಸೆಯ ಬಗ್ಗೆ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿಕೊಂಡಿದ್ದಾರೆ. ಕಾಪು ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

You cannot copy content from Baravanige News

Scroll to Top