ಉಡುಪಿ: ಮದಗಕ್ಕೆ ಈಜಲು ತೆರಳಿದ್ದ ಇಬ್ಬರು ನೀರುಪಾಲು

ಉಡುಪಿ : ಮದಗಕ್ಕೆ ಈಜಲು ತೆರಳಿದ್ದ ಇಬ್ಬರು ನೀರು ಪಾಲಾದ ಘಟನೆ ಕಂದಾವರ ಗ್ರಾಮದ ಉಳ್ಳೂರು – ಕಾಡಿನಕೊಂಡ ಎಂಬಲ್ಲಿ ನಡೆದಿದೆ.

ಉಪನ್ಯಾಸಕ ರಾಜೇಂದ್ರ ಶೆಟ್ಟಿಗಾರ (28) ಶಂಕರನಾರಾಯಣ ಹೈಸ್ಕೂಲ್ ವಿದ್ಯಾರ್ಥಿ ಭರತ್ ಶೆಟ್ಟಿಗಾರ (15) ನೀರಲ್ಲಿ ಮುಳುಗಿ ಮೃತರಾಗಿದ್ದಾರೆ.

ಸೋಮವಾರ ಸಂಜೆ ಬೊಬ್ಬರ್ಯನಕೊಡ್ಲು ಮದಗದಲ್ಲಿ ರಾಜೇಂದ್ರ, ಭರತ್ ಹಾಗೂ ಇನ್ನು ಮೂವರು ಬಾಲಕರು ಈಜಲು ನೀರಿಗಿಳಿದಿದ್ದಾರೆ. ಈ ವೇಳೆ ನಾಲ್ವರು ನೀರಲ್ಲಿ ಮುಳುಗುತ್ತಿದ್ದುದನ್ನು ಕಂಡ ರಾಜೇಂದ್ರ ಮೂವರನ್ನು ರಕ್ಷಿಸಿದ್ದು, ಆದರೆ ಭರತ್ ರನ್ನು ರಕ್ಷಿಸುವಷ್ಟರಲ್ಲಿ ತಾನು ಸಹ ಈಜಲು ಸಾಧ್ಯವಾಗದೇ ಸಾವನ್ನಪ್ಪಿರುವುದಾಗಿ ಸ್ಥಳೀಯರು ಹೇಳಿದ್ದಾರೆ.

ಶಂಕರನಾರಾಯಣ ಸಮೀಪದ ನಿವಾಸಿ ಗಣೇಶ್ ಶೆಟ್ಟಿಗಾರ್ ಅವರ ಪುತ್ರ ಭರತ್ ಎಸೆಸೆಲ್ಸಿ ವಿದ್ಯಾರ್ಥಿಯಾಗಿದ್ದು, ಅಜ್ಜಿಮನೆಗೆ ಬಂದಿದ್ದರು. ರಾಜೇಂದ್ರ ಅವರು ಶಂಕರನಾರಾಯಣದ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿದ್ದರು ಎಂದು ತಿಳಿದು ಬಂದಿದೆ.

ಇನ್ನು ಭರತ್ ರಜೆಯ ಕಾರಣ ತನ್ನ ತಾಯಿಯ ಮನೆಗೆ ಬಂದಿದ್ದ, ಬಹುಮುಖ ಪ್ರತಿಭಾವಂತ ರಾಜೇಂದ್ರ ಮಂಗಳೂರಿನ ಕಾಲೇಜೊಂದರಲ್ಲಿ ಸೇವೆ ಸಲ್ಲಿಸಿ, ಇತ್ತೀಚೆಗೆ ಶಂಕರನಾರಾಯಣ ಕಾಲೇಜಿಗೆ ಸೇರಿದ್ದರು. ಅಗ್ನಿ ಶಾಮಕದಳದವರು ಆಗಮಿಸಿ ಇಬ್ಬರ ಶವವನ್ನು ಮೇಲಕ್ಕೆತ್ತಿದ್ದಾರೆ.

ಈ ಬಗ್ಗೆ ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You cannot copy content from Baravanige News

Scroll to Top