ಉಡುಪಿ: ಪಾರ್ಟ್ ಟೈಮ್ ಉದ್ಯೋಗದ ಆಮಿಷದ ಜತೆಗೆ ಟಾಸ್ಕ್ ನೆಪದಲ್ಲಿ ಯುವಕನಿಗೆ ಲಕ್ಷಾಂತರ ರೂ. ವಂಚಿಸಿದ ಘಟನೆ ನಡೆದಿದೆ.
ಸೂರ್ಯಾನ್ ಸುನಿಲ್ ಅವರ ಮೊಬೈಲ್‌ಗೆ ಖಾಸಗಿ ಕಂಪೆನಿಯೊಂದರ ಹೆಸರಿನಲ್ಲಿ ಪಾರ್ಟ್‌ಟೈಮ್ ಉದ್ಯೋಗ ನಡೆಸಿ ಹಣ ಗಳಿಸುವ ಬಗ್ಗೆ ವಾಟ್ಸ್ ಆ್ಯಪ್‌ನಲ್ಲಿ ಸಂದೇಶ ಬಂದಿತ್ತು.
ಬಳಿಕ ಟೆಲಿಗ್ರಾಂ ಆ್ಯಪ್‌ನಲ್ಲಿ ಮಹಿಳೆಯೊಬ್ಬರು ಇವರನ್ನು ಸಂಪರ್ಕಿಸಿ ಟಾಸ್ಕ್ ನಡೆಸುವ ಬಗ್ಗೆ ಹಣ ಪಾವತಿಸುವಂತೆ ಬ್ಯಾಂಕ್ ಖಾತೆಗಳ ವಿವರವನ್ನು ನೀಡಿದ್ದರು. ಇದನ್ನು ನಂಬಿ ಅವರು ಮೇ 21ರಿಂದ 26ರ ನಡುವೆ ಒಟ್ಟು 7,30,926 ರೂ.ಗಳನ್ನು ಆರೋಪಿಗಳ ವಿವಿಧ ಖಾತೆಗಳಿಗೆ ಆನ್‌ಲೈನ್ ಮುಖೇನ ವರ್ಗಾಯಿಸಿಕೊಂಡಿದ್ದರು. ಆದರೆ ಆರೋಪಿಗಳು ಟಾಸ್ಕ್ ನಡೆಸಿದ ಬಳಿಕ ಹಣವನ್ನು ನೀಡದೆ ವಂಚಿಸಿದ್ದಾಗಿ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ : ಉದ್ಯೋಗದ ಆಮಿಷ: ಲಕ್ಷಾಂತರ ರೂ.ವಂಚನೆ
