ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಎಲ್ ಕೆ ಅತೀಕ್ ನೇಮಕ

ಬೆಂಗಳೂರು, ಮೇ 31: ಹಣಕಾಸು ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿ ಎಲ್ ಕೆ ಅತಿಕ್ ಅವರನ್ನು ಕರ್ನಾಟಕ ಸರ್ಕಾರ ನಿಯೋಜನೆ ಮಾಡಿ ಆದೇಶ ಹೊರಡಿಸಿದೆ.

ಜೂನ್ 30ಕ್ಕೆ ಹಾಲಿ ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ ಐಎಸ್‌ಎನ್ ಪ್ರಸಾದ್ ಅವರು ನಿವೃತ್ತಿಯಾಗಲಿದ್ದು, ವಿಶೇಷ ಕರ್ತವ್ಯದ ಮೇಲೆ ಜೂನ್ 30ರ ವರೆಗೆ ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಎಲ್​ಕೆ ಅತಿಕ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

ಇನ್ನು ಜೂನ್ 30ರಿಂದ ಹಣಕಾಸು ಇಲಾಖೆ ಅಡಿಷನಲ್ ಚೀಫ್ ಸೆಕ್ರೆಟರಿಯಾಗಿ ಎಲ್​ಕೆ ಅತೀಕ್ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

You cannot copy content from Baravanige News

Scroll to Top