ನವದೆಹಲಿ : ದೇಶದಲ್ಲೂ ಖಾದ್ಯ ತೈಲಗಳ ಗರಿಷ್ಠ ಮಾರಾಟ ಬೆಲೆಯನ್ನು ಪ್ರತಿ ಲೀಟರ್ ಗೆ ಗೆ 8 ರಿಂದ 12 ರೂಪಾಯಿ ಇಳಿಸುವಂತೆ ಕೇಂದ್ರ ಸರ್ಕಾರ ಖಾದ್ಯತೈಲ ಉತ್ಪಾದಕರ ಸಂಘಗಳಿಗೆ ಸೂಚನೆ ನೀಡಿದೆ.
ಈ ಕುರಿತು ಮಾಹಿತಿ ನೀಡಿರುವ ಆರೋಗ್ಯ ಕಾರ್ಯದರ್ಶಿ ಸಂಜೀವ್ ಛೋಪ್ರಾ, ಇತರ ಬ್ರಾಂಡ್‍ಗಳಿಗಿಂತ ಅಧಿಕ ಬೆಲೆ ಇರುವ, ಇನ್ನೂ ಬೆಲೆ ಕಡಿತಗೊಳಿಸದ ಬ್ರಾಂಡ್‍ಗಳ ಕಂಪನಿಗಳು ಬೆಲೆ ಇಳಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಉತ್ಪಾದಕರು ಹಾಗೂ ರಿಫೈನರಿಗಳು ವಿತರಕರಿಗೆ ನೀಡುವ ಬೆಲೆಯನ್ನು ಕೂಡಾ ತಕ್ಷಣದಿಂದ ಜಾರಿಯಾಗುವಂತೆ ಇಳಿಸಬೇಕು. ಈ ಮೂಲಕ ಬೆಲೆ ಇಳಿಕೆಯ ಲಾಭ ಉದ್ಯಮದಿಂದ ಜನಸಾಮಾನ್ಯರ ವರೆಗೆ ಎಲ್ಲರಿಗೂ ಲಭಿಸುವಂತಾಗಬೇಕು ಎಂದು ತಿಳಿಸಲಾಗಿದೆ.