ಕಾಪು: ಇನ್ನಂಜೆ ರೈಲು ನಿಲ್ದಾಣದಲ್ಲಿ ರೈಲು ನಿಲುಗಡೆಗೆ ಕೇಂದ್ರ ಸಚಿವರಿಗೆ ಮನವಿ

ಕಾಪು, ಜೂ.05: ತಾಲೂಕಿನ ಇನ್ನಂಜೆ ರೈಲು ನಿಲ್ದಾಣದಲ್ಲಿ ಮುಂಬೈ ಮತ್ತು ಬೆಂಗಳೂರು ರೈಲುಗಳಿಗೆ ನಿಲುಗಡೆ ನೀಡಬೇಕೆಂದು ಇನ್ನಂಜೆ ರೈಲು ನಿಲ್ದಾಣ ಅವಲಂಬಿತ ಗ್ರಾಮಸ್ಥರು ಕೇಂದ್ರ ಸಚಿವೆ ಶೋಭಾ ಕರಂದ್ಲಾಂಜೆ ಯವರಿಗೆ ಮನವಿಯನ್ನು ಸಲ್ಲಿಸಿದರು.

ಇನ್ನಂಜೆ ರೈಲ್ವೆ ನಿಲ್ದಾಣ ಮೇಲ್ದರ್ಜೆಗೆರಿದ್ದರೂ ಕೇವಲ ಒಂದು ಲೋಕಲ್ ರೈಲು ನಿಲುಗಡೆ ಆಗುತ್ತಿದ್ದು ಈ ಭಾಗದ ಜನರ ಬಹುಕಾಲದ ಬೇಡಿಕೆಯಾದ ಮುಂಬೈ ಹಾಗೂ ಬೆಂಗಳೂರು ರೈಲು ನಿಲುಗಡೆ ಆಗುತ್ತಿಲ್ಲ. ಎರಡು ಲೋಕಲ್ ರೈಲುಗಳಿಗೆ ನಿಲುಗಡೆ ಇದ್ದರೂ ಕೂಡ ಸದ್ಯ ಕೇವಲ ದು ಲೋಕಲ್ ರೈಲು ಮಾತ್ರ ನಿಲುಗಡೆ ಆಗುತ್ತಿದೆ. ಈ ಭಾಗದ ಹೆಚ್ಚಿನ ಜನರು ಉದ್ಯೋಹ ಮತ್ತು ವ್ಯಾಪಾರಕ್ಕಾಗಿ ಮುಂಬೈ, ಬೆಂಗಳೂರು ಮಹಾನಗರಗಳನ್ನು ಅವಲಂಬಿಸಿದ್ದಾರೆ, ಆದ್ದರಿಂದ ಇಲ್ಲಿಗೆ ತೆರಳುವ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನ್ನಂಜೆ ರೈಲು ನಿಲ್ದಾಣದಲ್ಲಿ ರೈಲು ನಿಲುಗಡೆಗೆ ಅವಕಾಶ ಮಾಡಿಕೊಡಬೇಕೆಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಂಜೆಯವರಿಗೆ ಮನವಿ ಸಲ್ಲಿಸಲಾಯಿತು.

Scroll to Top