ಮದುವೆ ವಾಹನದಂತೆ ಸಿಂಗರಿಸಿ ಅಕ್ರಮ ದನ ಸಾಗಾಟ ಮಾಡುತ್ತಿದ್ದಾಗ ಸಿಕ್ಕಿಬಿದ್ದ ಘಟನೆ ಉಡುಪಿಯ ಶಿರ್ವ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹಿಂಸಾತ್ಮಕವಾಗಿ ತುಂಬಿದ್ದರಿಂದ ಈ ಪೈಕಿ 2 ದನಗಳು ಸಾವನ್ನಪ್ಪಿದ್ದು, ನಾಲ್ಕು ದನಗಳಿಗೆ ಗಾಯವಾಗಿದೆ.

ಶಿರ್ವದಲ್ಲಿ ಇಂದು ಮುಂಜಾನೆ 4.30ರ ಸುಮಾರಿಗೆ ಮದುವೆ ವಾಹನದಂತೆ ಸಿಂಗರಿಸಿ ಮಂಗಳೂರು ಮೂಲದ ಇನೋವಾ ಕಾರ್‌ನಲ್ಲಿ ಎರಡು ದನ ಮತ್ತು ಅದರೊಂದಿಗಿದ್ದ ಪಿಕಪ್‌ನಲ್ಲಿ 13 ದನ ಸಾಗಾಟ ಮಾಡುತ್ತಿದ್ದರು.
ಇದರ ಬಗ್ಗೆ ಮಾಹಿತಿ ಹಿಂದೂ ಸಂಗಟನೆಯ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅದರನ್ವಯ ಪಡೆದ ಶಿರ್ವ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಶ್ರೀಶೈಲ ಮುರಗೋಡ ಹಾಗೂ ಸಿಬ್ಬಂದಿಯಾದ ಸಂತೋಷ್, ಪ್ರಮೋದ್, ಪ್ರಸಾದ್ ಕಾಪು ಬಳಿ ತಡೆಹಿಡಿದಿದ್ದಾರೆ.

ಈ ವೇಳೆ ಪಿಕಪ್ ವಾಹನದಲ್ಲಿ 13 ದನಗಳನ್ನು ಹಿಂಸಾತ್ಮಕವಾಗಿ ತುಂಬಿಸಿ ಸಾಗಾಟಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಪೈಕಿ 2 ಗಂಡು ಕರು ಸಾವನ್ನಪ್ಪಿದ್ದು, ನಾಲ್ಕು ದನಗಳಿಗೆ ಗಾಯವಾಗಿದೆ. ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ, ತನಿಖೆ ನಡೆಸುತ್ತಿದ್ದಾರೆ.