ಓವರ್ ಮೇಕಪ್ನಿಂದ ತಾಯಿಯ ಗುರುತೇ ಸಿಗದೆ ಬಿಕ್ಕಿ ಬಿಕ್ಕಿ ಅತ್ತ ಬಾಲಕ : ಎಂಥಾ ಅವಸ್ಥೆ ಮಾರ್ರೆ..!!!

ಮೇಕಪ್ ಅಂದ್ರೆ ಸುಮ್ನೇನಾ!. ಎಂಥವರನ್ನೂ ಸಹ ಅಪ್ಸರೆಯಂತೆ ಮಾಡುವ ಶಕ್ತಿ ಮೇಕಪ್ಗಿದೆ. ಕುರುಪಿಯಾಗಿದ್ರು ಮೇಕಪ್ ಮೂಲಕ ಚಂದಗಾಣಿಸಬಹುದಾಗಿದೆ. ಹಾಗಾಗಿ ಯುವತಿಯರಿಗೆ ಮೇಕಪ್ ಅಂದ್ರೆ ಫೇವರೆಟ್. ಆದ್ರೆ ಮೇಕಪ್ನಿಂದ ಏನೆಲ್ಲಾ ಅನಾಹುತ ಆಗುತ್ತೆ ಗೊತ್ತಾ?. ಯಾಕಂದ್ರೆ ಈ ಸ್ಟೋರಿ ಓದಿ.

ಈ ಪುಟ್ಟ ಬಾಲಕ ಅಳುತ್ತಿರುವುದೇನೋ ನಿಜ. ಆದರೆ ಆತ ಅಳುವುದಕ್ಕೆ ಕಾರಣವಿದೆ. ಬಾಲಕ ತನ್ನ ತಾಯಿಯನ್ನು ಹುಡುಕುತ್ತಿದ್ದಾನೆ. ಆದರೆ ತಾಯಿ ಮಾತ್ರ ಪಕ್ಕದಲ್ಲೇ ಇದ್ದು, ಎಷ್ಟೇ ಬಾರಿ ಮಗನ ಬಳಿ ನಾನೇ ನಿನ್ನ ತಾಯಿ ಎಂದು ಹೇಳಿದರು ಮಗ ಮಾತ್ರ ಒಪ್ಪಿಕೊಳ್ಳುತ್ತಿಲ್ಲ. ಇದಕ್ಕೆ ಕಾರಣ ಮೇಕಪ್.


ನೋಡಲು ತಮಾಷೆ ಎಂದೆನಿದರು ಈ ಸಂಗತಿ ಮಾತ್ರ ಭಿನ್ನವಾಗಿದೆ. ಅಂದಹಾಗೆಯೇ ತಾಯಿ ತನ್ನ ಮೇಕಪ್ನಿಂದ ಮುಖದ ಚಂದವೇ ಬದಲಾಗಿ ಹೋಗಿದೆ. ಆದರೆ ಬಾಲಕ ಮಾತ್ರ ಇದು ನನ್ನ ತಾಯಿ ಎಂಬ ನಂಬಿಕೆ ಬರುತ್ತಿಲ್ಲ. ತಾನು ಯಾವಾಗಲು ನೋಡುತ್ತಿದ್ದ ತಾಯಿಗಾಗಿ ಆತ ಹುಡುಕಾಡುತ್ತಿದ್ದಾನೆ. ಅದಕ್ಕಾಗಿ ಕಣ್ಣೀರು ಹಾಕುತ್ತಿದ್ದಾನೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮೇಕಪ್ನಿಂದ ಗುರುತೇ ಬದಲಾಗುವಷ್ಟು ಚೆಂದಗಾಣಿಸಬಹುದಾಗಿದೆ. ಈ ತಾಯಿ ಕೂಡ ಮೇಕಪ್ ಮಾಡಿದ್ದಕ್ಕೆ ತನ್ನ ಮಗನೇ ಕನ್ಫೂಸ್ ಆಗಿರೋದು ನಂಬಲಸಾಧ್ಯವಾಗಿದೆ.

Scroll to Top