ಮುರುಡೇಶ್ವರ : ಪ್ರವಾಸಕ್ಕೆ ಬಂದಿದ್ದ ಓರ್ವ ಸಮುದ್ರಪಾಲು, ಇಬ್ಬರ ರಕ್ಷಣೆ

ಭಟ್ಕಳ : ಮುರುಡೇಶ್ವರಕ್ಕೆ ಪ್ರವಾಸ ಬಂದಿದ್ದ ತಂಡವೊಂದು ಕಡಲಿನಲ್ಲಿ ಇಳಿದ ಸಂದರ್ಭ ಓರ್ವ ನೀರು ಪಾಲಾಗಿದ್ದರೆ ಮತ್ತಿಬ್ಬರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿರುವ ಘಟನೆ ನಡೆದಿದೆ.


ಸಂತೋಷ ಹುಲಿಗುಂಡೆ (19) ಎನ್ನುವ ಯುವಕ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದು, ಹಸನ್ ಮಜಗಿಗೌಡ (21) ಹಾಗೂ ಸಂಜೀವ ಹೆಬ್ಬಳ್ಳಿ (20) ಎನ್ನುವವರನ್ನು ರಕ್ಷಣೆ ಮಾಡಲಾಗಿದೆ.

ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ನಿವಾಸಿಗಳ 22 ಜನರ ಗುಂಪೊಂದು ಸಿಗಂದೂರು, ಕೊಲ್ಲೂರು ಪ್ರವಾಸ ಮುಗಿಸಿ ಸೋಮವಾರ ಮುರುಡೇಶ್ವರಕ್ಕೆ ಆಗಮಿಸಿದ್ದು, ಸಮುದ್ರದ ಆಳೆತ್ತರ ಅಲೆಯನ್ನು ಲೆಕ್ಕಿಸದೇ ಸಮುದ್ರಕ್ಕಿಳಿದು ಆಟವಾಡುವ ವೇಳೆ ಮೂವರು ಅಲೆಯ ರಭಸಕ್ಕೆ ಸಿಕ್ಕಿ ಕೊಚ್ಚಿಕೊಂಡು ಹೋಗಿದ್ದರು.

ಕಳೆದ ಮೂರ್ನಾಲ್ಕು ದಿನಗಳಿಂದ ಅರಬ್ಬಿ ಸಮುದ್ರದಲ್ಲಿ ಬಿಪರ್‌ಜೋಯ್ ಚಂಡಮಾರುತ ತೀವ್ರಗೊಳ್ಳುತ್ತಿದ್ದು, ಚಂಡಮಾರುತದ ಸಮಯದಲ್ಲಿ ಸಮುದ್ರಕ್ಕೆ ಸಮೀಪಿಸದಂತೆ ಅಧಿಕಾರಿಗಳು ಎಚ್ಚರಿಸಿದ್ದಾರೆ.

You cannot copy content from Baravanige News

Scroll to Top