ಬೆಂಗಳೂರು: ಹೆಂಡತಿಯನ್ನ ಮನೆಗೆ ಕಳಿಸದೇ ಇದ್ದದ್ದಕ್ಕೆ ಅಳಿಯ ತನ್ನ ಅತ್ತೆಗೆ ಚಾಕು ಇರಿದ ಘಟನೆ ಬೆಳ್ಳಂದೂರು ಬಳಿಯ ಇಬ್ಬಲೂರಿನಲ್ಲಿ ನಡೆದಿದೆ. ಗೀತಾ ಚಾಕು ಇರಿತಕ್ಕೊಳಗಾದ ಅತ್ತೆ.
ಪತಿ ಮನೋಜ್ ಕಿರುಕುಳದಿಂದ ಪತ್ನಿ ವರ್ಷಿತಾ ನೊಂದಿದ್ದಳು. ಹೀಗಾಗಿ ವರ್ಷಿತಾ ಮನನೊಂದು ತವರು ಮನೆ ಸೇರಿದ್ದಳು. ಈ ಹಿನ್ನೆಲೆಯಲ್ಲಿ ಪತ್ನಿಯನ್ನು ಕರೆತರಲು ಹೋಗಿದ್ದ ಅಳಿಯ ಮನೋಜ್ ತನ್ನ ಅತ್ತೆ ಗೀತಾಗೆ ಚಾಕು ಇರಿದಿದ್ದಾನೆ.
ಅತ್ತೆಗೆ ಚುಚ್ಚಿದ ಅಳಿಯ
ಹೆಂಡತಿಯನ್ನು ಮನೆಗೆ ಕರೆತರಲು ಮನೋಜ್ ಅತ್ತೆ ಮನೆಗೆ ಹೋಗಿದ್ದಾನೆ. ಆದರೆ ಈ ವೇಳೆ ಅತ್ತೆ ಮತ್ತು ಅಳಿಯ ನಡುವೆ ಗಲಾಟೆ ನಡೆದಿದೆ. ಈ ವೇಳೆ ಸಿಟ್ಟಿಗೆದ್ದ ಮನೋಜ್ ತನ್ನ ಅತ್ತೆ ಗೀತಾ ಗೆ ಚಾಕು ಇರಿದು ಎಸ್ಕೇಪ್ ಆಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಬೆಳ್ಳಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.