ಫ್ರೀ ಬಸ್ನಲ್ಲಿ ಮಹಿಳೆಯರ ಫುಲ್ ಫೈಟಿಂಗ್.. ; ಗಲಾಟೆ ನೋಡುತ್ತಾ ನಿಂತ ಕಂಡಕ್ಟರ್…!!

ಬೆಂಗಳೂರು : ಸರ್ಕಾರ ಶಕ್ತಿ ಯೋಜನೆ ಜಾರಿಗೆ ತಂದಿದ್ದೆ, ತಂದಿದ್ದು ಉಚಿತವಾಗಿ ಬಸ್ನಲ್ಲಿ ಮಹಿಳೆಯರು ಪ್ರಯಾಣ ಮಾಡುತ್ತಿದ್ದಾರೆ. ಪುಣ್ಯ ಕ್ಷೇತ್ರಗಳಿಗೆ. ತಮ್ಮ ಸಂಬಂಧಿಕರ ಮನೆಗಳಿಗೆ, ತಮಗಿಷ್ಟ ಬಂದಲ್ಲಿಗೆ ತೆರಳುತ್ತಿದ್ದಾರೆ. ಇದರಿಂದ ಕೆಲವು ಬಸ್ನಲ್ಲಿ ಸೀಟ್ಗಾಗಿ ಜಗಳ ನಡೆದಿದ್ದೂ ಇದೆ. ಸದ್ಯ ಅಂತಹದ್ದೆ ಘಟನೆ ನಡೆದಿದ್ದು ಮಹಿಳೆಯರು ಬಸ್ನಲ್ಲಿ ಫುಲ್ ಫೈಟಿಂಗ್ ಮಾಡಿಬಿಟ್ಟಿದ್ದಾರೆ.

ಮಹಿಳೆಯರಿಂದಲೇ ಫುಲ್ ರಶ್ ಆಗಿದ್ದ ಬಸ್ ತೆರಳುತ್ತಿತ್ತು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಮಹಿಳೆಯರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಗಲಾಟೆ ತೀವ್ರವಾಗಿದ್ದರಿಂದ ಕೈ, ಕೈ ಮಿಲಾಯಿಸಿ ಬಿಟ್ಟಿದ್ದಾರೆ. ಫುಲ್ ರಶ್ನಲ್ಲಿದ್ದ ಬಸ್ನಲ್ಲೇ ಮಹಿಳೆಯರು ಗುದ್ದಾಡಿದ್ದರಿಂದ ಮಕ್ಕಳು ಭಯದಿಂದ ಚೀರಾಡಿದ್ದಾರೆ. ಇಬ್ಬರು ಯುವಕರ ನಡುವೆ ಮಾರಾಮಾರಿ ಆಗುತ್ತಿದ್ದಾಗ ಇಬ್ಬರನ್ನು ಬಿಡಿಸಿ ಸಮಾಧಾನ ಮಾಡಲಾಗಿದೆ.

ಇನ್ನು ಕಂಡಕ್ಟರ್ ಅಂತೂ ನನಗೇನು ಸಂಬಂಧವಿಲ್ಲ ಎಂದು ಗಲಾಟೆ ನೋಡುತ್ತಾ ನಿಂತಿದ್ದಾರೆ. ಈ ನಾರಿಯರ ಜಗಳ ಬಿಡಿಸಲು ಸಹ ಪ್ರಯಾಣಿಕರು ಹರಸಾಹಸ ಪಟ್ಟರು. ಆದ್ರೆ ಈ ವಿಡಿಯೋ ಎಲ್ಲಿ, ಯಾಕೆ, ಯಾರ-ಯಾರ ನಡುವೆ ನಡೆಯಿತು ಎಂಬುದರ ಬಗ್ಗೆ ನಿಖರವಾದ ಮಾಹಿತಿ ತಿಳಿದಿಲ್ಲ.

ಇದು ಅಲ್ಲದೇ, ಹಾಸನದ ಬಳಿ ಕೆ.ಎಸ್.ಆರ್.ಟಿ.ಸಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರು ವಿಂಡೋ ಸೀಟ್ಗಾಗಿ ವಾಗ್ವಾದ ಮಾಡಿದ್ದಾರೆ. ಕಿಟಕಿ ಪಕ್ಕದ ಸೀಟ್ ನನಗೆ ಬೇಕು ಬಿಡು ಅಂತಾ ಮಹಿಳೆಯರು ಪರಸ್ಪರ ಕಿತ್ತಾಡಿದ್ದಾರೆ. ಈ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

You cannot copy content from Baravanige News

Scroll to Top