ಕಾಪು: ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಕಾಪು ತಾಲೂಕಿನ ಗ್ರಾಮ ಪಂಚಾಯತ್ಗಳ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳಿಗೆ ಮುಂದಿನ 30 ತಿಂಗಳ ಅವಧಿಗೆ ಮೀಸಲಾತಿ ನಿಗದಿಪಡಿಸುವ ಸಭೆಯು ಕಾಪು ಶ್ರೀ ಲಕ್ಷ್ಮೀ ಜನಾರ್ದನ ಸಭಾ ಭವನದಲ್ಲಿ ಜೂ.22ರ ಗುರುವಾರ ನಡೆಯಿತು.
ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್, ಸಹಾಯಕ ಕಮೀಷನರ್ ರಶ್ಮಿ, ಕಾಪು ತಹಶೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ, ಜಿಲ್ಲಾಧಿಕಾರಿ ಕಚೇರಿ ಚುನಾವಣಾ ತಹಶೀಲ್ದಾರ್ ಪರಶುರಾಮ ಕಲಾಲ್, ಎನ್.ಐ.ಸಿ ತಾಂತ್ರಿಕ ನಿರ್ದೇಶಕ ಮಂಜುನಾಥ್, ಸೇರಿದಂತೆ ಚುನಾವಣಾ ಇಲಾಖಾಧಿಕಾರಿಗಳು, ಸಿಬಂದಿ ಉಪಸ್ಥಿತರಿದ್ದರು.
ಕಾಪು ತಾಲೂಕು:
ಗ್ರಾ. ಪಂ. : ಅಧ್ಯಕ್ಷ – ಉಪಾಧ್ಯಕ್ಷ
ಬೆಳ್ಳೆ : ಸಾಮಾನ್ಯ ಮಹಿಳೆ – ಹಿಂದುಳಿದ ವರ್ಗ ಎ
ಕುರ್ಕಾಲು : ಹಿಂದುಳಿದ ವರ್ಗ ಎ – ಸಾಮಾನ್ಯ ಮಹಿಳೆ
ಶಿರ್ವ : ಹಿಂದುಳಿದ ವರ್ಗ ಎ ಮಹಿಳೆ – ಸಾಮಾನ್ಯ
ಇನ್ನಂಜೆ : ಸಾಮಾನ್ಯ – ಸಾಮಾನ್ಯ ಮಹಿಳೆ
ಕಟಪಾಡಿ : ಸಾಮಾನ್ಯ – ಹಿಂದುಳಿದ ವರ್ಗ ಎ ಮಹಿಳೆ
ಕೋಟೆ : ಸಾಮಾನ್ಯ ಮಹಿಳೆ – ಸಾಮಾನ್ಯ
ಮಜೂರು : ಸಾಮಾನ್ಯ – ಸಾಮಾನ್ಯ ಮಹಿಳೆ
ಕುತ್ಯಾರು : ಹಿಂದುಳಿದ ವರ್ಗ (ಎ) – ಅನುಸೂಚಿತ ಜಾತಿ ಮಹಿಳೆ
ಮುದರಂಗಡಿ : ಅನುಸೂಚಿತ ಜಾತಿ ಮಹಿಳೆ – ಹಿಂದುಳಿದ ವರ್ಗ ಬಿ
ಬೆಳಪು : ಸಾಮಾನ್ಯ – ಸಾಮಾನ್ಯ ಮಹಿಳೆ
ಬಡಾ : ಸಾಮಾನ್ಯ – ಸಾಮಾನ್ಯ
ಎಲ್ಲೂರು : ಸಾಮಾನ್ಯ – ಹಿಂದುಳಿದ ವರ್ಗ ಎ ಮಹಿಳೆ
ಫಲಿಮಾರು : ಹಿಂದುಳಿದ ವರ್ಗ ಬಿ ಮಹಿಳೆ – ಸಾಮಾನ್ಯ
ತೆಂಕ : ಹಿಂದುಳಿದ ವರ್ಗ ಎ ಮಹಿಳೆ – ಸಾಮಾನ್ಯ
ಪಡುಬಿದ್ರಿ : ಸಾಮಾನ್ಯ ಮಹಿಳೆ – ಹಿಂದುಳಿದ ವರ್ಗ ಎ
ಹೆಜಮಾಡಿ : ಸಾಮಾನ್ಯ ಮಹಿಳೆ – ಸಾಮಾನ್ಯ