ಉಡುಪಿ: ಮಲ್ಪೆ ಬೀಚ್ ದಡಕ್ಕೆ ತೇಲಿಬಂದ ನೂಡಲ್ ಮಾದರಿಯ ವಸ್ತು : ಹೆಚ್ಚಿನ ಅಧ್ಯಯನಕ್ಕಾಗಿ ಗೋವಾಕ್ಕೆ ರವಾನೆ

ಉಡುಪಿ : ಜಿಲ್ಲೆಯ ಮಲ್ಪೆ ಕಡಲತೀರಕ್ಕೆ ನೂಡಲ್ಸ್ ಮಾದರಿಯ ವಸ್ತುಗಳು ತೇಲಿಬರುತ್ತಿರುವುದನ್ನು ನೋಡಿದ ಜನರ ಅಚ್ಚರಿಗೊಂಡಿದ್ದಾರೆ. ಹೀಗೆ ತೇಲಿ ಬರುತ್ತಿವೆ ವಸ್ತುಗಳು ಸುಮಾರು 15 ಕಿ.ಮೀ ಉದ್ದಕ್ಕೂ ವ್ಯಾಪಿಸಿದೆ. ಈ ವಸ್ತುವು ಮನುಷ್ಯರಿಗೆ ಅಥವಾ ಪ್ರಾಣಿಗಳಿಗೆ ಯಾವುದೇ ಹಾನಿಯಿಲ್ಲ ಎಂದು ಉಡುಪಿ ಮೀನುಗಾರಿಕಾ ಜಂಟಿ ನಿರ್ದೇಶಕ ವಿವೇಕ್ ಹೇಳಿದ್ದಾರೆ.

ನೂಡಲ್ಸ್ ಮಾದರಿಯ ವಸ್ತುಗಳು ಪತ್ತೆಯಾಗಿರುವ ಸ್ಥಳಕ್ಕೆ ಭೇಟಿ ನೀಡಿದ ಮಂಗಳೂರಿನ ಮೀನುಗಾರಿಕಾ ಕಾಲೇಜು ಮತ್ತು ಮಂಗಳೂರಿನ ಕೇಂದ್ರೀಯ ಸಾಗರ ಮೀನುಗಾರಿಕಾ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳ ತಂಡವು ಪರಿಶೀಲನೆ ನಡೆಸಿತು. ಸಮುದ್ರ ಜೀವಿಗಳ ಚಿಪ್ಪುಗಳದ್ದಾಗಿರಬಹುದು ಎಂದು ಮೀನುಗಾರಿಕಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಶಿವಕುಮಾರ್ ಮಗದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ಬಿಪರ್‌ಜೋಯ್ ಚಂಡಮಾರುತದ ಹುಳುಗಳು ಸ್ಥಳಾಂತಗೊಂಡಿರಬಹುದು ಎಂದು ಅವರು ಹೇಳಿದ್ದಾಗಿ ಸುದ್ದಿ ಸಂಸ್ಥೆ ದಿ ಹಿಂದು ವರದಿ ಮಾಡಿದೆ.

ಈ ವಸ್ತುವು ಪೋಷಕಾಂಶಗಳಿಂದ ಸಮೃದ್ಧವಾಗಿದೆ ಮತ್ತು ಗುಂಡಿಗಳಲ್ಲಿ ಹೂಳುವ ಮೂಲಕ ಗೊಬ್ಬರವಾಗಿ ಪರಿವರ್ತಿಸಬಹುದು. ಇದರಿಂದ ಯಾವುದೇ ತೊಂದರೆ ಇಲ್ಲ. ಇದರ ಹೊರತಾಗಿ, ಅವುಗಳನ್ನು ಮತ್ತೆ ಸಮುದ್ರಕ್ಕೆ ತಳ್ಳಬಹುದು. ನಂತರ ಅವು ಸಮುದ್ರ ಜೀವಿಗಳಿಗೆ ಆಹಾರವಾಗುತ್ತವೆ ಎಂದು ಹೇಳಿದ್ದಾರೆ.

ಉಡುಪಿ ಮೀನುಗಾರಿಕಾ ಜಂಟಿ ನಿರ್ದೇಶಕ ವಿವೇಕ್ ಮಾತನಾಡಿ, ಒಂದು ವಾರದಿಂದ ಜಿಲ್ಲೆಯ ಕಡಲತೀರದ ಸುಮಾರು 15 ಕಿ.ಮೀ ಉದ್ದಕ್ಕೂ ಈ ವಸ್ತುಗಳು ಕಾಣಿಸಿಕೊಂಡಿವೆ. ಪ್ರತಿದಿನ, ಹೆಚ್ಚಿನ ವಸ್ತುಗಳು ತೀರಕ್ಕೆ ಕೊಚ್ಚಿಕೊಂಡು ಬರುತ್ತಿವೆ. ಮೀನುಗಾರರು ಮತ್ತು ತೀರಕ್ಕೆ ಹತ್ತಿರವಿರುವ ಜನರು ಇದರ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ಹೇಳಿದರು.

ಹೆಚ್ಚಿನ ಅಧ್ಯಯನ ಮತ್ತು ಸಂಶೋಧನೆಗಾಗಿ ವಸ್ತುಗಳನ್ನು ಗೋವಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷಿಯಾನೋಗ್ರಫಿ, ಕೊಚ್ಚಿಯಲ್ಲಿರುವ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಫಿಶರೀಸ್ ಟೆಕ್ನಾಲಜಿ ಮತ್ತು ಕೊಚ್ಚಿಯ ಸೆಂಟ್ರಲ್ ಮೆರೈನ್ ಫಿಶರೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ಗೆ ಕಳುಹಿಸಲಾಗುತ್ತಿದೆ.

You cannot copy content from Baravanige News

Scroll to Top