ಬಸ್ ನಲ್ಲಿ ಮಹಿಳೆ ಜೊತೆ ಅಸಭ್ಯ ವರ್ತನೆ : ವ್ಯಕ್ತಿ ವಿರುದ್ದ ದೂರು ದಾಖಲು…!!

ಪುತ್ತೂರು : ಯುವತಿಯೊಬ್ಬಳು ತನ್ನ ತಾಯಿಯೊಂದಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿರುವಾಗ ಅಪರಿಚಿತ ವ್ಯಕ್ತಿಯೊಬ್ಬ ಆಕೆಯ ಮೈ ಕೈ ಮುಟ್ಟಿ ಕಿರುಕುಳ ನೀಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.



ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.



20 ವರ್ಷದ ಯುವತಿಯೊಬ್ಬಳು ಉಪ್ಪಳ- ಪುತ್ತೂರು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ತನ್ನ ತಾಯಿಯೊಂದಿಗೆ ಪುತ್ತೂರಿಗೆ ಪ್ರಯಾಣಿಸುತ್ತಿದ್ದಳು.

ಈ ವೇಳೆ ಯುವತಿಯ ಹಿಂದೆ ಕುಳಿತಿದ್ದ ಅಪರಿಚಿತ ವ್ಯಕ್ತಿ ತನ್ನನ್ನು ಮುಟ್ಟಿದ್ದಾರೆ.

ಅಪರಿಚಿತ ವ್ಯಕ್ತಿ ಎರಡನೇ ಬಾರಿಗೆ ಅದೇ ರೀತಿಯಾಗಿ ಮಾಡಿದಾಗ ಯುವತಿ ತನ್ನ ಕಾಲು ಸರಿಸಿದ್ದಾಳೆ.

ಈ ಸಮಯದಲ್ಲಿ, ಅಪರಿಚಿತ ವ್ಯಕ್ತಿ ತನ್ನ ಕೈಗಳನ್ನು ಸೀಟ್‌ಗಳ ನಡುವೆ ಇಟ್ಟು, ತನ್ನ ಸೊಂಟದ ಕೆಳಗೆ ಮುಟ್ಟಿದ್ದಾನೆ.

ಬಳಿಕ ಆತ ಪುತ್ತೂರಿನ ಬೊಳ್ವಾರು ಬಳಿ ಬಸ್ ನಿಂದ ಇಳಿದಿದ್ದಾನೆ.



ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಐಪಿಸಿ ಸೆಕ್ಷನ್ 354ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ತನಿಖೆ ಆರಂಭಿಸಿದ್ದಾರೆ.

You cannot copy content from Baravanige News

Scroll to Top