ಹಿಂದೂಗಳ ಪವಿತ್ರ ‘ಅಮರನಾಥ ಯಾತ್ರೆ’ ಆರಂಭ

ಶ್ರೀನಗರ: ಹಿಂದೂಗಳ ಪವಿತ್ರ ಯಾತ್ರೆ ಅಮರನಾಥ ಯಾತ್ರೆಗೆ ಚಾಲನೆ ಸಿಕ್ಕಿದೆ. ಯಾತ್ರಾರ್ಥಿಗಳ ಮೊದಲ ಬ್ಯಾಚ್‌ಗೆ ಹಸಿರು ನಿಶಾನೆ ತೋರಿಸಲಾಗಿದೆ.

ಬಾಲ್ಟಾಲ್ ಬೇಸ್ ಕ್ಯಾಂಪ್‌ನಲ್ಲಿ ಶ್ರೀ ಅಮರನಾಥ ಜಿ ಪುಣ್ಯಕ್ಷೇತ್ರ ಮಂಡಳಿಯ ಹಿರಿಯ ಅಧಿಕಾರಿಗಳು ಮತ್ತು ಪೊಲೀಸರೊಂದಿಗೆ ಗಂದರ್‌ಬಾಲ್ ಉಪ ಆಯುಕ್ತ ಶ್ಯಾಂಬೀರ್ ಯಾತ್ರೆಗೆ ಚಾಲನೆ ನೀಡಿದರು.

62 ದಿನಗಳ ಅಮರನಾಥ ಯಾತ್ರೆಯು ಪ್ರಾರಂಭವಾಗಿದ್ದು, ಕಾಶ್ಮೀರದ ಗಂದರ್‌ಬಾಲ್ ಜಿಲ್ಲೆಯ ಬಲ್ಟಾಲ್ ಬೇಸ್ ಕ್ಯಾಂಪ್‌ನಿಂದ ಗುಹೆ ದೇಗುಲಕ್ಕೆ ಯಾತ್ರಿಕರು ಹೊರಟಿದ್ದಾರೆ. ಬಿಗಿ ಭದ್ರತೆಯ ನಡುವೆ ಶನಿವಾರ ಮುಂಜಾನೆ ಯಾತ್ರಾರ್ಥಿಗಳು ಬೇಸ್ ಕ್ಯಾಂಪ್‌ನಿಂದ ನಿರ್ಗಮಿಸಿದರು.

ಮೊದಲ ಬ್ಯಾಚ್‌ನಲ್ಲಿ 7 ರಿಂದ 8 ಸಾವಿರ ಮಂದಿ ಯಾತ್ರಾರ್ಥಿಗಳಿದ್ದಾರೆ. ಬೇಸ್ ಕ್ಯಾಂಪ್‌ನಿಂದ ಸುಮಾರು 13,000 ಅಡಿ ಎತ್ತರದಲ್ಲಿರುವ ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ ಪವಿತ್ರ ಅಮರನಾಥ ಗುಹೆಯ ದೇಗುಲಕ್ಕೆ 12 ಕಿಮೀ ಪ್ರಯಾಣವನ್ನು ಕೈಗೊಂಡಿದ್ದಾರೆ. 62 ದಿನಗಳ ಯಾತ್ರೆಯು ಆಗಸ್ಟ್ 31 ರಂದು ಮುಕ್ತಾಯಗೊಳ್ಳಲಿದೆ. ಕಳೆದ ಬಾರಿ ಮೇಘಸ್ಪೋಟ ಸಂಭವಿಸಿ ಯಾತ್ರಿಗಳು ನಾನಾ ತೊಂದರೆ ಅನುಭವಿಸಿದ್ದರು. ಹೀಗಾಗಿ ಈ ಬಾರಿ ಹೆಚ್ಚಿನ ನಿಗಾ ವಹಿಸಲಾಗಿದೆ.

ಇಂದು ನಾವು ಪ್ರಯಾಣಿಕರ ಮೊದಲ ಬ್ಯಾಚ್‌ನ್ನು ಕಳುಹಿಸುತ್ತಿದ್ದೇವೆ. ಎಲ್ಲರಿಗೂ ಪ್ರಯಾಣ ಸುಖಕರವಾಗಿರಲಿ. ನಮ್ಮ ಸ್ವಯಂಸೇವಕರು ಸಹಾಯ ಮಾಡಲು ಎಲ್ಲೆಡೆ ಇದ್ದಾರೆ ಎಂದು ಶ್ಯಾಂಬಿರ್ ಹೇಳಿದ್ದಾರೆ.

Scroll to Top