ಮಂಗಳೂರು : ಟಾಲಿವುಡ್ ಅಂಗಳದಲ್ಲಿ ಮಿಂಚುತ್ತಿರುವ ಕರಾವಳಿ ಬೆಡಗಿ ಕೃತಿ ಶೆಟ್ಟಿ ಅವರು ಸ್ಟಾರ್ ನಟನ ಮಗನಿಂದ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ.
ನಟಿಗೆ ಸ್ಟಾರ್ ನಟನ ಮಗನೊಬ್ಬ ಕಿರುಕುಳ ಕೊಡುತ್ತಿದ್ದಾನೆ ಎಂದು ಸುದ್ದಿ ವೈರಲ್ ಆಗುತ್ತಿದ್ದು, ಇದರಿಂದ ಕೃತಿಗೆ ಆ ನಟನಿಂದ ಸಂಕಷ್ಟ ಎದುರಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.
ತೆಲುಗಿನ ‘ಉಪ್ಪೇನಾ’ ಸಿನಿಮಾದ ಮೂಲಕ ಯಶಸ್ಸು ಗಿಟ್ಟಿಸಿಕೊಂಡ ನಟಿ ಕೃತಿ ಶೆಟ್ಟಿ ಅವರು ಸಾಕಷ್ಟು ಸ್ಟಾರ್ ನಟರ ಸಿನಿಮಾದಲ್ಲಿ ನಟಿಸಿದ್ದಾರೆ. ಇತ್ತೀಚಿಗೆ ನಾಗಚೈತನ್ಯ ಜೊತೆ ‘ಕಸ್ಟಡಿ’ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ.
ಇದೀಗ ಸ್ಟಾರ್ ನಟನ ಪುತ್ರನಿಂದ ಕಿರುಕುಳ ಶುರುವಾಗಿದೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಈ ಕುರಿತು ಸಂದರ್ಶನವೊಂದರಲ್ಲಿ ಕೃತಿ ಹಂಚಿಕೊಂಡಿದ್ದಾರೆ ಎನ್ನಲಾಗ್ತಿದೆ.
ಕೃತಿ ಶೆಟ್ಟಿ ಜೊತೆ ಸ್ನೇಹ ಮಾಡಲು ಸ್ಟಾರ್ ನಟನ ಮಗನೊಬ್ಬ ಪ್ರಯತ್ನಿಸುತ್ತಿದ್ದಾನಂತೆ. ಇದೇ ಕಾರಣಕ್ಕೆ ಪದೇ ಪದೇ ಫೋನ್ ಮಾಡಿ ಆತ ನಟಿಗೆ ಕಿರುಕುಳ ನೀಡುತ್ತಿದ್ದಾನೆ. ಪ್ರತಿಯೊಂದು ಕಾರ್ಯಕ್ರಮದಲ್ಲಿ ಆಕೆಯ ಹಿಂದೆಯೇ ತಿರುಗಾಡುತ್ತಾ ತೊಂದರೆ ಕೊಡುತ್ತಿದ್ದಾನೆ ಎನ್ನಲಾಗ್ತಿದೆ. ಆದರೆ ಆತ ಯಾರು ಎಂಬುದು ಎಲ್ಲಿಯೂ ರಿವೀಲ್ ಆಗಿಲ್ಲ. ಆತ ಫೋನ್ ಮಾಡಿ ಕಿರುಕುಳ ನೀಡಿದ್ದಾಗಿ ಆಕೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.