ಕೊಲ್ಲೂರಿನಲ್ಲಿ ಮಹಿಳೆಯ ಪರ್ಸ್ ನಿಂದ ಚಿನ್ನಾಭರಣ ಎಗರಿಸಿದ್ದ ಆರೋಪಿ ಅರೆಸ್ಟ್

ಕುಂದಾಪುರ : ಕೊಲ್ಲೂರು ದೇವಿಯ ದರ್ಶನಕ್ಕೆ ಜೂನ್ 4ರಂದು ಬಂದಿದ್ದ ಮಹಿಳೆಯ ಪರ್ಸ್ ನಿಂದ ಕಳುವಾಗಿದ್ದ ಹದಿಮೂರೂವರೆ ಪವನ್ ಚಿನ್ನಾಭರಣ ಕಳವಿಗೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಖಾಸಗಿ ಬಸ್ಸೊಂದರಲ್ಲಿ ಕೆಲಸ ಮಾಡುತ್ತಿದ್ದ ತೀರ್ಥಹಳ್ಳಿ ಮೂಲದ ಗಿರೀಶ್ ಬಿ.ಜಿ. (32) ನನ್ನು ಬಂಧಿಸಿದ ಪೊಲೀಸರು ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ಪ್ರಕರಣದ ಬೆನ್ನತ್ತಿದ ಪೊಲೀಸರು ಸಿಸಿ ಕೆಮೆರಾದ ಜಾಡು ಹಿಡಿದು ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿ ಎಗರಿಸಿದ್ದ ಎನ್ನಲಾದ 7½ ಪವನ್ ಚಿನ್ನದ ಚೈನ್, 3 ಪವನ್ ತೂಕದ ಎರಡು ಚಿನ್ನದ ಬಳೆ, 1½ ಪವನ್ ಚಿನ್ನದ ಚೈನ್, ½ ಪವನ್ ಚಿನ್ನದ ಬಳೆ, 1 ಪವನ್ ತೂಕದ 4 ಜೊತೆ ಚಿನ್ನದ ಕಿವಿ ಓಲೆ ಸಹಿತ ಒಟ್ಟು 13½ ಪವನ್ (108 ಗ್ರಾಂ) ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ.

You cannot copy content from Baravanige News

Scroll to Top