Sunday, September 8, 2024
Homeಸುದ್ದಿ65 ಸಾವಿರ ಗಡಿ ದಾಟಿ ದಾಖಲೆ ಬರೆದ ಸೆನ್ಸೆಕ್ಸ್‌; ಒಂದೇ ದಿನ ಹೂಡಿಕೆದಾರರ ಸಂಪತ್ತು 2...

65 ಸಾವಿರ ಗಡಿ ದಾಟಿ ದಾಖಲೆ ಬರೆದ ಸೆನ್ಸೆಕ್ಸ್‌; ಒಂದೇ ದಿನ ಹೂಡಿಕೆದಾರರ ಸಂಪತ್ತು 2 ಲಕ್ಷ ಕೋಟಿ ಹೆಚ್ಚಳ

ಮುಂಬೈ: ಗೃಹಸಾಲ ಮಾರುಕಟ್ಟೆಯ ಪ್ರಮುಖ ಕಂಪನಿ ಹೆಚ್‌ಡಿಎಫ್‌ಸಿ ಹಾಗೂ ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್‌ ಆಗಿರುವ ಹೆಚ್‌ಡಿಎಫ್‌ಸಿ ಬ್ಯಾಂಕ್‌ನ ವಿಲೀನವನ್ನು ಹೂಡಿಕೆದಾರರು ಸ್ವಾಗತಿಸಿದ ಪರಿಣಾಮ ಬಾಂಬೆ ಷೇರು ಮಾರುಕಟ್ಟೆ ಸಂವೇದಿ ಸೂಚಂಕ್ಯ ಸೆನ್ಸೆಕ್ಸ್‌ ಮೊದಲ ಬಾರಿಗೆ 65 ಸಾವಿರದ ಗಡಿಯನ್ನು ದಾಟಿದೆ.

ಶುಕ್ರವಾರ 64,718 ರಲ್ಲಿ ಕೊನೆಯಾಗಿದ್ದರೆ ಇಂದು 65,205 ಅಂಶದಲ್ಲಿ ಕೊನೆಯಾಗಿದೆ. ಶುಕ್ರವಾರ ಒಂದೇ ದಿನ ಸೆನ್ಸೆಕ್ಸ್‌ 803.14 ಅಂಶ ಏರಿದ್ದರೆ ಸೋಮವಾರ 0.75% ಅಥವಾ 486.49 ಅಂಶ ಏರಿಕೆಯಾಗಿದೆ. ಒಂದು ಹಂತದಲ್ಲಿ ಸೆನ್ಸೆಕ್‌ 65,300.35 ಅಂಶಕ್ಕೆ ಹೋಗಿತ್ತು.

ಹೆಚ್‌ಡಿಎಫ್‌ಸಿ ಬ್ಯಾಂಕು ಷೇರು ಮೌಲ್ಯ ಇಂದು 1.15% ಅಥವಾ 19.60 ರೂ. ಏರಿಕೆಯಾಗಿ ಅಂತಿಮವಾಗಿ 1,721 ರೂ.ನಲ್ಲಿ ವಹಿವಾಟು ಮುಗಿಸಿತು. ಹೆಚ್‌ಡಿಎಫ್‌ಸಿ ಷೇರು ಮೌಲ್ಯ 1.79% ಅಥವಾ 50.60 ರೂ. ಏರಿಕೆಯಾಗಿ ಅಂತಿಮವಾಗಿ 2,872.55 ರೂ.ನಲ್ಲಿ ವಹಿವಾಟು ಕೊನೆಗೊಳಿಸಿತು.

ಹೆಚ್‍ಡಿಎಫ್‍ಸಿ ಬ್ಯಾಂಕ್, ಮಹೀಂದ್ರಾ ಅಂಡ್ ಮಹೀಂದ್ರಾ, ಆಲ್ಟ್ರಾಟೆಕ್ ಸಿಮೆಂಟ್, ಟಾಟಾ ಸ್ಟೀಲ್, ಬಜಾಜ್ ಫೈನಾನ್ಸ್ ಷೇರುಗಳು ದೊಡ್ಡಮಟ್ಟದಲ್ಲಿ ಟ್ರೇಡಿಂಗ್ ಆಗಿವೆ. ಪರಿಣಾಮ ಒಂದೇ ದಿನದಲ್ಲಿ ಹೂಡಿಕೆದಾರರ ಸಂಪತ್ತು 2 ಲಕ್ಷ ಕೋಟಿ ರೂ. ಏರಿಕೆಯಾಗಿದೆ. ಜೂನ್‌ ತಿಂಗಳಲ್ಲಿ ಜಿಎಸ್‌ಟಿ ಸಂಗ್ರಹ ಏರಿಕೆ, ಹೆಚ್‌ಡಿಎಫ್‌ಸಿ ವಿಲೀನ ಸುದ್ದಿ ಹೂಡಿಕೆದಾರರಿಗೆ ಸಿಹಿ ನೀಡಿದ ಪರಿಣಾಮ ಸೆನ್ಸೆಕ್ಸ್‌ ಮೊದಲ ಬಾರಿಗೆ 65 ಸಾವಿರದ ಗಡಿಯನ್ನು ದಾಟಿದೆ.

ಸೆನ್ಸೆಕ್ಸ್‌ ಯಾವ ವರ್ಷ ಎಷ್ಟು ಏರಿಕೆ?

ಫೆಬ್ರವರಿ 6, 2006 – 10,000
ಅಕ್ಟೋಬರ್‌ 29, 2007- 20,000
ಮಾರ್ಚ್‌ 04, 2015 – 30,000
ಮೇ 23, 2019 – 40,000
ಜನವರಿ 21, 2021 -50,000
ಸೆಪ್ಟೆಂಬರ್‌ 24, 2021 -60,000
ಜುಲೈ 03, 2023 – 65,000

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚಂಕ್ಯ ನಿಫ್ಟಿ ಇಂದು 0.70% ಅಥವಾ 133.50 ಅಂಶ ಏರಿಕೆಯಾಗಿ 19,322.55 ಅಂಶದಲ್ಲಿ ಕೊನೆಯಾಗಿದ್ದು ಇದು ಸಾರ್ವಕಾಲಿಕ ದಾಖಲೆಯಾಗಿದೆ. ಶುಕ್ರವಾರ 19,189 ಅಂಶದಲ್ಲಿ ಕೊನೆಯಾಗಿತ್ತು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News