ಶಿರ್ವ: ಸಂತ ಮೇರಿ ಕಾಲೇಜು ‘ವಾರ್ಷಿಕೋತ್ಸವ ಸಮಾರಂಭ’

ಶಿರ್ವ, ಜು.08: ಶಿರ್ವ ಸಂತ ಮೇರಿ ಕಾಲೇಜಿನ ಫಾ.ಹೆನ್ರಿ ಕಸ್ತಲಿನೊ ಸಭಾಂಗಣದಲ್ಲಿ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವು ಶುಕ್ರವಾರ ನಡೆಯಿತು.

ಮುಖ್ಯ ಅತಿಥಿಗಳಾಗಿ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಜೋಸೆಫ್ ಎನ್. ಎಂ. ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಕಾಲೇಜಿನ ಹಿರಿಯ ಉಪನ್ಯಾಸಕ ಡಾ. ವಿಟ್ಠಲ್ ನಾಯಕ್ ಅವರನ್ನು ಪಿಎಚ್‌ಡಿ ಸಾಧನೆಗಾಗಿ ಸನ್ಮಾನಿಸಲಾಯಿತು. ಅಂತಾರಾಷ್ಟ್ರೀಯ ಕ್ರೀಡಾಪಟು, ಪ್ರಥಮ ಬಿ.ಎ. ವಿದ್ಯಾರ್ಥಿನಿ ಸಮಿತಾ ಅವರನ್ನು ಗೌರವಿಸಲಾಯಿತು. ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ. ಹೆರಾಲ್ಡ್ ಐವನ್ ಮೋನಿಸ್ ವಹಿಸಿದ್ದರು. ವೇದಿಕೆಯಲ್ಲಿ ಆರೋಗ್ಯ ಮಾತಾ ದೇಗುಲದ ಪಾಲನ ಮಂಡಳಿ ಉಪಾಧ್ಯಕ್ಷ ಮೆಲ್ವಿನ್ ಮ್ಯಾಕ್ಸಿಮ್ ಅರಾನ್ವ ಪಿಟಿಎ ಅಧ್ಯಕ್ಷ ಜೋಷ ರೊಡ್ರಿಗಸ್ ಶಂಕರಪುರ, ಹಳೆವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಚಾರ್ಲ್ಸ್ ಮೋಹನ್‌ ನೊರೋನ್ನಾ ಸ್ಟಾಪ್ ಸೆಕ್ರೆಟರಿ ರೀಮಾ ಲೋಬೊ, ಎಸ್‌.ಡಬ್ಲ್ಯುಸಿ ಅಧ್ಯಕ್ಷ ದೇರಿಲ್ ಡಿಸಿಲ್ವ ಕಾರ್ಯದರ್ಶಿ ತರುಣ್ ರಮೇಶ್ ಉಪಸ್ಥಿತರಿದ್ದರು. ಉಪನ್ಯಾಸಕಿ ಯಶೋದಾ ಸ್ವಾಗತಿಸಿ, ಉಪನ್ಯಾಸಕಿ ದಿವ್ಯಶ್ರೀ ನಿರೂಪಿಸಿ, ಸ್ಟಾಪ್‌ ಕಾರ್ಯದರ್ಶಿ ಸಂಗೀತಾ ಪೂಜಾರಿ ವಂದಿಸಿದರು.

You cannot copy content from Baravanige News

Scroll to Top