ದ.ಕ., ಉಡುಪಿಯಿಂದ ಅಮರನಾಥ ಯಾತ್ರೆ ತೆರಳಿದ್ದ 20 ಯಾತ್ರಾರ್ಥಿಗಳು ಸೇಫ್

ದಕ್ಷಿಣ ಕನ್ನಡ / ಉಡುಪಿ : ಅಮರನಾಥ ಯಾತ್ರೆ ಕೈಗೊಂಡಿದ್ದ ದ.ಕ‌‌.ಜಿಲ್ಲೆಯ ಬಂಟ್ವಾಳ ಸಹಿತ ವಿವಿಧ ತಾಲೂಕಿನ ಒಟ್ಟು 20 ಮಂದಿ ಯಾತ್ರಾರ್ಥಿಗಳು ಸೇಫ್ ಆಗಿ ಸಿ.ಆರ್.ಪಿ.ಎಫ್ ನ ಕ್ಯಾಂಪ್ ನಲ್ಲಿ ಇದ್ದೇವೆ ಎಂದು ತಂಡದ ನೇತೃತ್ವದ ವಹಿಸಿರುವ ನರಿಕೊಂಬಿನ ಸಂತೋಷ್ ಮಾರುತಿನಗರ ಅವರು ತಿಳಿಸಿದ್ದಾರೆ.

ಭೂಕುಸಿತದಿಂದ ಅಮರನಾಥ ಯಾತ್ರಿಗಳು ಪಾರಾದ ಬಗ್ಗೆ ವರದಿ ಬಂದ ಬೆನ್ನಲ್ಲೆ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಸಂತೋಷ್ ಎಂಬವರ ಜೊತೆ ಯಾತ್ರೆಗೆ ತೆರಳಿದ 20 ಮಂದಿ ಯಾತ್ರಾರ್ಥಿಗಳು ಯಾವುದೇ ತೊಂದರೆಯಿಲ್ಲದೆ ಸುರಕ್ಷಿತವಾಗಿದ್ದೇವೆ ಎಂದು ತಿಳಿಸಿದ್ದಾರೆ.

ಅತಿಯಾದ ಮಳೆಗೆ ಭೂಕುಸಿತ ಕಂಡು ಬಂದಿದ್ದು ಯಾತ್ರಾರ್ಥಿಗಳು ಜಾಗರೂಕತೆಯಿಂದ ಇರುವಂತೆ ತಿಳಿಸಿದ್ದಾರೆ ಮತ್ತು ಸದ್ಯ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.

ರಂಭಾನ್ ಎಂಬ ಸ್ಥಳದಲ್ಲಿ ಗುಡ್ಡ ಕುಸಿತ ಕಂಡ ಹಿನ್ನೆಲೆಯಲ್ಲಿ ಅಮರನಾಥ ದೇವಾಲಯಕ್ಕೆ ತೆರಳುವ ದಾರಿ ಸಂಪೂರ್ಣ ಸ್ಥಗಿತಗೊಂಡಿದೆ.

ನರಿಕೊಂಬುನಿಂದ ಒಟ್ಟು 5 ಮಂದಿ, ಮಂಗಳೂರು ಅಡ್ಯಾರನಿಂದ 8 ಯಾತ್ರಾರ್ಥಿಗಳು, ಪುತ್ತೂರಿನಿಂದ 1, ಉಡುಪಿಯಿಂದ 1 , ಮೂಡಬಿದಿರೆಯಿಂದ 1 , ಸಜೀಪದಿಂದ 3, ಉಪ್ಪಿನಂಗಡಿ ಕರಾಯದಿಂದ 1 ಹೀಗೆ ಒಟ್ಟು 20 ಯಾತ್ರಾರ್ಥಿಗಳು ಯಾತ್ರೆಗೆ ತೆರಳಿದ್ದಾರೆ.

ಕಳೆದ ಬಾರಿ ಇದೇ ರೀತಿಯಲ್ಲಿ ಭೂಕುಸಿತ ಕಂಡ ಸಂದರ್ಭದಲ್ಲಿ ಇಲ್ಲಿನ ಯಾತ್ರಾರ್ಥಿಗಳು ಅಲ್ಲಿ ಸಿಲುಕಿಕೊಂಡಿದ್ದರು. ಅ ಸಂದರ್ಭದಲ್ಲಿ ಕೂಡ ಸುರಕ್ಷಿತವಾಗಿ ಯಾವುದೇ ಸಮಸ್ಯೆಗಳಿಲ್ಲದೆ ಹಿಂದುರಿಗಿದ್ದರು.

You cannot copy content from Baravanige News

Scroll to Top