ಉಡುಪಿ: ಅಪಾರ್ಟ್ ಮೆಂಟ್ ವೊಂದರ ಕಿಟಕಿಯ ಫ್ರೇಂ ಒಂದರಲ್ಲಿ ಸಿಲುಕಿಕೊಂಡಿದ್ದ ವಿಶೇಷಚೇತನ ಬಾಲಕನನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಉಡುಪಿಯ ಬ್ರಹ್ಮಗಿರಿಯಲ್ಲಿ ಸಂಭವಿಸಿದೆ.
ಎಂಟು ವರ್ಷದ ಆರುಷ್ ರಕ್ಷಣೆ ಮಾಡಲ್ಪಟ್ಟ ವಿಶೇಷ ಚೇತನ ಬಾಲಕನಾಗಿದ್ದಾನೆ.
ಅರು಼ಷ್ ಅಪಾರ್ಟ್ ಮೆಂಟ್‌ನ 11 ನೇ ಮಹಡಿಯ ಬಾಲ್ಕನಿ ಮೂಲಕ ಹೊರ ಹೋಗಿ 10ನೇ ಮಹಡಿಯ ಕಿಟಕಿ ಪೋರಂನಲ್ಲಿ ಸಿಲುಕಿಕೊಂಡಿದ್ದ.
ಇದನ್ನು ನೋಡಿದ್ದ ಸ್ಥಳೀಯರು ಕೂಡಲೇ ತಕ್ಷಣ ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸಾಹಸ ಮೆರೆದು ಯಶಸ್ವಿ ಕಾರ್ಯಚರಣೆ ನಡೆಸಿ ಬಾಲಕನನ್ನು ಸುರಕ್ಷಿತವಾಗಿ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಟ್ಟಡದ ಹೊರಗಡೆ ಬಾಲಕ ಸಿಲುಕಿದ್ದರಿಂದ ಸ್ವಲ್ಪ ಎಡವಿದರೂ ಬಾಲಕನ ಜೀವಕ್ಕೆ ಅಪಾಯವಿತ್ತು.
ಇದನ್ನು ಮನಗಂಡ ಅಗ್ನಿಶಾಮಕ ದಳದ ಸಿಬಂದಿ ಬಹಳ ಸಂಯಮದಿಂದ ಕಾರ್ಯಾಚರಣೆ ನಡೆಸಿ ಬಾಲಕನನ್ನು ರಕ್ಷಣೆ ಮಾಡಲು ಸಾಧ್ಯವಾಗಿದ್ದು ಈ ಮೂಲಕ ಆರುಷ್ ಪೋಷಕರು ನಿಟ್ಟುಸಿರು ಬಿಡುವಂತಾಯಿತು.