ಉಡುಪಿ : ಸಂತೆಕಟ್ಟೆ ಓವರ್ ಪಾಸ್ ರಸ್ತೆ ಕುಸಿತ ; ನೂರಾರು ಮನೆಗಳಿಗೆ ಸಂಪರ್ಕ ಕಡಿತ

ಉಡುಪಿ : ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಸುರಿತಾ ಇದ್ದ ಮಳೆಗೆ ಕೊಂಚ ವಿರಾಮ ಸಿಕ್ಕಿದರೂ ಜಿಲ್ಲೆಯಲ್ಲಿ ಮಳೆ ಹಾನಿ ಮುಂದುವರೆದಿದ್ದು, ಸಂತೆಕಟ್ಟೆ ಓವರ್ ಪಾಸ್ ರಸ್ತೆ ಕಾಮಗಾರಿ ಅವ್ಯವಸ್ಥೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 66 ಸರ್ವಿಸ್ ರಸ್ತೆ ಕುಸಿತವಾಗಿದೆ.

ಐದಾರು ದಿನ ಸುರಿದ ಭಾರೀ ಮಳೆಗೆ ಮಣ್ಣು ಸಡಿಲಗೊಂಡು ರಸ್ತೆ ಕುಸಿತವಾಗಿದೆ.

ಸಮೀಪದಲ್ಲೇ ಬಹುಮಹಡಿ ಕಟ್ಟಡಗಳು ಇದ್ದು, ಅವುಗಳೂ ಕೂಡ ಕುಸಿಯುವ ಭೀತಿಯನ್ನು ಎದುರಿಸುತ್ತಿದೆ.

ಮಳೆ ಹಾಗೂ ರಸ್ತೆ ಕಾಮಗಾರಿಯ ವೇಳೆ ಬಂಡೆ ಕಲ್ಲು ಸಿಕ್ಕ ಪರಿಣಾಮ ತಾತ್ಕಾಲಿಕವಾಗಿ ರಸ್ತೆ ಕಾಮಗಾರಿಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು. ಇದರಿಂದ ಉಡುಪಿ ಕುಂದಾಪುರ ಸಂಪರ್ಕ ರಸ್ತೆ ಕಡಿತಗೊಳ್ಳುವ ಸಾಧ್ಯತೆ ಇದೆ.

ಮಂಗಳೂರಿಗೆ ತೆರಳುವ ಬಾರಿ ಗಾತ್ರದ ವಾಹನಗಳು ಇದೇ ಹೆದ್ದಾರಿಯಲ್ಲಿ ಓಡಾಟ ಮಾಡುತ್ತಿದ್ದು ಅವುಗಳ ಸಂಚಾರಕ್ಕೆ ಸಮಸ್ಯೆ ಉಂಟಾಗಲಿದೆ.

ಮಣ್ಣು ಮತ್ತಷ್ಟು ಕುಸಿದರೆ ಈ ಪರಿಸರದ ನೂರಾರು ಮನೆಗಳಿಗೆ ಸಂಪರ್ಕ ಕಡಿತವಾಗುತ್ತದೆ.

ಮಾತ್ರವಲ್ಲ ವಾಹನಗಳ ಸಂಚಾರಕ್ಕೆ ತಡೆ ಉಂಟಾಗುವ ಸಾಧ್ಯತೆ ಎನ್ನುವ ಆತಂಕವನ್ನು ಸ್ಥಳೀಯ ನಿವಾಸಿಗಳು ವ್ಯಕ್ತಪಡಿಸಿದ್ದಾರೆ.

Scroll to Top