ಉಡುಪಿ, ಜು.10: ಉಡುಪಿಯ ಅಕ್ರಮ ಜೂಜು ಅಡ್ಡೆಗೆ ಪೊಲೀಸರು ದಾಳಿ ನಡೆಸಿದ್ದಾರೆ.
ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಮೊಗೆಬೆಟ್ಟು ಬಾರಿನ ಸಮೀಪ ಅಕ್ರಮವಾಗಿ ಇಸ್ಪೀಟು ಜುಗಾರಿ ಆಟವಾಡುತ್ತಿದ್ದ ಮಾಹಿತಿ ಪಡೆದ ಬ್ರಹ್ಮಾವರ ಸರ್ಕಲ್ ಇನ್ಸ್‌ಪೆಕ್ಟರ್ ದಿವಾಕರ್ ಪಿ.ಎಂ ಮತ್ತು ತಂಡ ದಾಳಿ ನಡೆಸಿದೆ.
ದಾಳಿ ಸಂದರ್ಭ ಸ್ಥಳದಲ್ಲಿ ಜೂಜು ನಿರತರಾಗಿದ್ದ 13 ಜನರನ್ನು ಬಂಧಿಸಿದ್ದು ಜೂಜಾಟಕ್ಕೆ ಬಳಸಿದ ರೂ. 1,09,355 ನಗದು ಹಾಗೂ ಆರೊಪಿಗಳ 5 ಬೈಕುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.