ಜೈನ ಮುನಿ ಹತ್ಯೆ ಪ್ರಕರಣ : ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಪೇಜಾವರ ಶ್ರೀ ಆಗ್ರಹ

ಉಡುಪಿ: ಬೆಳಗಾವಿ ತಾಲೂಕಿನ ಚಿಕ್ಕೋಡಿಯ ಜೈನ ಮುನಿ ಹೀರೆಕುಡಿಯ ಆಚಾರ್ಯ ಶ್ರೀ 108 ಕಾಮ ಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣವನ್ನು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಖಂಡಿಸಿದ್ದಾರೆ.



ಈ ಕುರಿತು ಉಡುಪಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಈ ವಿಚಾರವನ್ನು ಕೇಳಿ ನಮಗೆ ಬಹಳ ದುಖಃವಾಗಿದ್ದು, ಇದು ಜನತೆಯನ್ನು ಗಾಬರಿಗೊಳಿಸುವ ಪ್ರಸಂಗವಾಗಿದೆ.

ಒಬ್ಬ ಸಾಧುವನ್ನು ಈ ರೀತಿಯಾಗಿ ಹತ್ಯೆ ಮಾಡುತ್ತಾರೆ ಅಂದ್ರೆ ಇನ್ನು ಜನ ಸಾಮಾನ್ಯರ ಪಾಡು ಏನು… ಎಂದು ಅವರು ಪ್ರಶ್ನಿಸಿದ್ದಾರೆ.

ಮಂದಿನ ದಿನಗಳಲ್ಲಿ ಇಂತಹ ಕೃತ್ಯಗಳೂ ಎಲ್ಲೂ ಕೂಡ ನಡೆಯಬಾರದು.

ಈ ಘಟನೆಯನ್ನು ನಾವು ತೀಕ್ಷಣವಾದ ಮಾತುಗಳಿಂದ ಖಂಡಿಸುತ್ತಿದ್ದೇವೆ.

ಸರಕಾರ ಈ ಕೂಡಲೇ ಇದರ ಕುರಿತಾಗಿ ಕ್ರಮಕೈಗೊಂಡು ಅಪರಾಧಿಗಳನ್ನು ಶಿಕ್ಷಿಸಬೇಕು ಎಂದು ಆಗ್ರಹಿಸಿದರು.

Scroll to Top