ಮಲ್ಪೆ ಬೀಚ್ ನಲ್ಲಿ ದಡಕ್ಕೆ ಸೇರಿದ ಪ್ಲಾಸ್ಟಿಕ್ ತ್ಯಾಜ್ಯ ರಾಶಿ

ಉಡುಪಿ : ಇತ್ತೀಚೆಗೆ ಸುರಿದ ಭಾರೀ ಮಳೆ ಮತ್ತು ಗಾಳಿಯಿಂದ ಉಡುಪಿಯಲ್ಲಿ ಕಡಲು ಪ್ರಕ್ಷುಬ್ಧಗೊಂಡು ಅಬ್ಬರಿಸಿತ್ತು.

ಈ ವೇಳೆ ಬೃಹತ್ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸಿದ್ದವು.



ಮಾತ್ರವಲ್ಲ ಈ ಬೃಹತ್ ಗಾತ್ರದ ಅಲೆಗಳ ಜೊತೆಗೆ, ಪ್ರವಾಸಿಗರು ಎಸೆದ ಟನ್ ಗಟ್ಟಲೆ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳು ಕಡಲ ಕಿನಾರೆಯಲ್ಲಿ ಬಂದು ಬಿದ್ದಿವೆ.

ಇದರಿಂದ ಮಲ್ಪೆ ಬೀಚ್ ಡಂಪಿಂಗ್ ಯಾರ್ಡ್ ನಂತಾಗಿದೆ.



ಇಲ್ಲಿನ ಈ ಸಮಸ್ಯೆಯ ಕುರಿತು ಜೀವ ರಕ್ಷಕ ಸಿಬ್ಬಂದಿ ಮಧು ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದು, ಕಡಲ ಕಿನಾರೆಯುದ್ದಕ್ಕೂ ಸಾವಿರಾರು ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ಬಾಟಲಿಗಳು, ಮರದ ತುಂಡುಗಳು, ಚಪ್ಪಲಿಗಳು, ಪ್ಲಾಸ್ಟಿಕ್ ಲೋಟಗಳು, ಒಡೆದ ಗ್ಲಾಸ್ ಚೂರುಗಳು ಸೇರಿದಂತೆ ನೂರಾರು ಟನ್ ತ್ಯಾಜ್ಯಗಳು ಕಡಲಗರ್ಭದೊಳಗೆ ಸೇರಿ ಈಗ ದಡ ಸೇರಿಕೊಂಡಿವೆ.



ಕಿಲೋಮೀಟರ್ ದೂರದಷ್ಟು ಉದ್ದಗಲಕ್ಕೂ ತ್ಯಾಜ್ಯದ ರಾಶಿಗಳು ಬಂದು ಬಿದ್ದಿವೆ.

ಹೀಗಾಗಿ ಬೀಚ್ ಆಗಮಿಸುವ ಪ್ರವಾಸಿಗರು ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ಕಡಲಿಗೆ ಎಸೆಯದಂತೆ ಮಾಧ್ಯಮಗಳ ಮೂಲಕ ಅವರು ಮನವಿ ಮಾಡಿದ್ದಾರೆ.

Scroll to Top