ಕಾರ್ಕಳ : ತಾನು ಕೆಲಸ ನಿರ್ವಹಿಸುತ್ತಿದ್ದ ಕಚೇರಿಯಲ್ಲೇ ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಕಾರ್ಕಳದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ನಗರದ ಮಾರ್ಕೆಟ್ ಬಳಿಯ ನಿವಾಸಿ ಪ್ರಮೀಳಾ ದೇವಾಡಿಗ (32) ಎಂದು ಗುರುತಿಸಲಾಗಿದ್ದು, ಇವರು ಕಾರ್ಕಳ ಪೇಟೆಯ ಮಾರ್ಕೆಟ್ ರಸ್ತೆಯಲ್ಲಿರುವ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಇತರ ಸಿಬ್ಬಂದಿ ಬೆಳಗ್ಗೆ ಕರ್ತವ್ಯಕ್ಕೆ ಹಾಜರಾದ ಸಂದರ್ಭ ಪ್ರಮೀಳಾ ನೇಣು ಬಿಗಿದಿರುವುದು ಕಂಡು ಬಂದಿದೆ. ಅವರು ನೇಣು ಬಿಗಿಯಲು ಮನೆಯಿಂದಲೇ ಸೀರೆ ತಂದಿರಬೇಕು ಎಂದು ಶಂಕಿಸಲಾಗಿದೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.
ಮೃತರು ಪತಿ ಹಾಗೂ ಪುತ್ರನನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಕಾರ್ಕಳ ನಗರ ಠಾಣೆಯಲ್ಲಿ ದಾಖಲಾಗಿದೆ.