ಬಂಟಕಲ್ಲು ಇಂಜಿನಿಯರಿಂಗ್ ಕಾಲೇಜು ಮುಂಭಾಗದಲ್ಲಿನ ರಸ್ತೆಯ ಹೊಂಡಗಳನ್ನು ರಿಕ್ಷಾ ಮಾಲಕರು ಹಾಗೂ ಚಾಲಕರು (ರಿ.) ಬಂಟಕಲ್ಲು ಹಾಗೂ ಸ್ಥಳೀಯ ಸಂಘಟನೆಗಳ ಸಹಕಾರದಿಂದ ಕಾಂಕ್ರೀಟು ಹಾಕಿ ಮುಚ್ಚಲಾಯಿತು.
ರಸ್ತೆ ಹದಗೆಟ್ಟು ವರುಷಗಳು ಕಳೆದರೂ ಸಂಬಂಧ ಪಟ್ಟ ಇಲಾಖೆಯಿಂದ ಯಾವುದೇ ಪ್ರತಿಕ್ರಿಯೆ ದೊರೆತಿರಲಿಲ್ಲ.
ಈ ರಸ್ತೆಯಲ್ಲಿ ನಿರಂತರವಾಗಿ ಅಪಘಾತಗಳು ನಡೆಯುತ್ತಿದ್ದು, ಮಳೆಗಾಲದಲ್ಲಿ ಅಪಘಾತದ ಪ್ರಮಾಣ ಇನ್ನೂ ಜಾಸ್ತಿಯಾಗಿದೆ. ರಸ್ತೆ ಗುಂಡಿಗಳಲ್ಲಿ ನೀರು ನಿಂತಿರುವುದರಿಂದ ಇದರ ಅರಿವಿಲ್ಲದ ಸವಾರರು ಅಪಘಾತಗಳನ್ನು ಎದುರಿಸಬೇಕಾಗಿತ್ತು.
ಇದರ ತೀವ್ರತೆಯನ್ನು ಅರಿತು ಈ ರಸ್ತೆಯ ಬಗ್ಗೆ ಬರವಣಿಗೆ ನ್ಯೂಸ್ ವಿಸ್ತಾರವಾಗಿ ವರದಿ ಮಾಡಿತ್ತು.
ಇದಕ್ಕೆ ತಕ್ಷಣ ಸ್ಪಂದಿಸಿದ ರಿಕ್ಷಾ ಚಾಲಕ ಮಾಲಕರ ಹಾಗೂ ಚಾಲಕರ ಸಂಘ (ರಿ.) ಬಂಟಕಲ್ಲು ಹಾಗೂ ಸ್ಥಳೀಯ ಸಂಘಟನೆಗಳು ಇಂದು ಬೆಳಗ್ಗೆ ಗುಂಡಿಗಳನ್ನು ಕಾಂಕ್ರಿಟ್ ನಿಂದ ಮುಚ್ಚಿದ್ದಾರೆ. ಇವರ ಈ ಕೆಲಸಕ್ಕೆ ಸ್ಥಳೀಯ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನಾದರೂ ಸಂಬಂಧ ಪಟ್ಟ ಇಲಾಖೆ ಎಚ್ಚೆತ್ತು ಈ ರಸ್ತೆಗೆ ಉತ್ತಮ ಗುಣಮಟ್ಟದ ಡಾಮರೀಕರಣ ಮಾಡಿ ಮುಂದೆ ಆಗುವ ಅಪಘಾತಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕು.